ಹಿರಿಯ ಜೀವಗಳನ್ನು ಊರಾಚೆಗೆ ಎತ್ತೆಸೆಯುವ ಇಂದೋರ್ ನಗರ ಪಾಲಿಕೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಇದೇ ಘಟನೆಯಲ್ಲಿ ನಾಪತ್ತೆಯಾಗಿದ್ದ ತಮ್ಮ ಪತಿಯನ್ನು ಹಿರಿಯ ಮಹಿಳೆಯೊಬ್ಬರು ಕಂಡುಕೊಳ್ಳುವಲ್ಲಿ ಸಫಲರಾಗಿದ್ದಾರೆ.
ನಿರ್ಗತಿಕರಾದ ಹಿರಿಯ ವ್ಯಕ್ತಿಗಳನ್ನು ನಗರದಿಂದ ಆಚೆಗೆ ಕೊಂಡೊಯ್ಯುತ್ತಿದ್ದ ಚಿತ್ರಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಂಡ ಪುಷ್ಪ ಸಲ್ವಿ, ತಮ್ಮ ಪತಿ ಅನಿಲ್ ಸಲ್ವಿ (50) ಅವರನ್ನು ಗುರುತಿಸಿದ್ದಾರೆ. ಇಂದೋರ್ ಹೊರವಲಯದ ನಿಪಿಯಾನಾ ಬೈಪಾಸ್ ರಸ್ತೆಯಲ್ಲಿ ಪುಷ್ಪ ಅವರ ಪತಿ ಸಿಕ್ಕಿದ್ದಾರೆ.
ಯುವತಿಯೊಂದಿಗೆ ರೂಮ್ ಸೇರಿದ ಕಂಟ್ರಾಕ್ಟರ್: ಹುಡುಕಿಕೊಂಡು ಬಂದ ಸ್ನೇಹಿತರಿಗೆ ಬಿಗ್ ಶಾಕ್
ಮಾನಸಿಕವಾಗಿ ನೊಂದಿದ್ದ ಈ ವ್ಯಕ್ತಿ ಕಳೆದ ತಿಂಗಳು ತಮ್ಮ ಮನೆ ಬಿಟ್ಟು ಹೋಗಿದ್ದರು. ತಮ್ಮ ಪತಿಯನ್ನು ಪತ್ತೆ ಮಾಡಲು ವಿಫಲರಾದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ನಗರ ಪಾಲಿಕೆ ಸಿಬ್ಬಂದಿ ನೆರವಿನಿಂದ ಪುಷ್ಪ ತಮ್ಮ ಪತಿಯನ್ನು ಮತ್ತೆ ಕೂಡಿಕೊಂಡಿದ್ದಾರೆ.