
ಹಿಂದೆಲ್ಲಾ ಮನೆಗಳಲ್ಲಿ ಪಾತ್ರೆ ತೊಳೆಯುವುದಕ್ಕೆ ಬೂದಿಯನ್ನು ಉಪಯೋಗಿಸುತ್ತಿದ್ದರು.
ಆಮೇಲಿನ ಜನರೇಷನ್ ಇದನ್ನು ಬಳಸುವುದೇ ಒಂದು ನಾಚಿಕೆ ಅನ್ನುವ ರೀತಿ ವರ್ತಿಸುವುದಕ್ಕೆ ಶುರು ಮಾಡಿದರೂ. ಈಗ ಮರಳಿ ಮಣ್ಣಿಗೆ ಎನ್ನುವಂತೆ ಇದೇ ಬೂದಿಯನ್ನು ದುಡ್ಡು ಕೊಟ್ಟು ಕೊಂಡುಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಈ ಬೂದಿಯ ಉಪಯೋಗವೇನು ಎಂಬುದನ್ನು ತಿಳಿಯೋಣ ಬನ್ನಿ.
ಈ ಬೂದಿಯನ್ನು ಗಾರ್ಡನಿಂಗ್, ಕೀಟಗಳನ್ನು ನಿಯಂತ್ರಿಸಲು ಹಾಗೂ ಕಾಸ್ಮೆಟಿಕ್ಸ್ ಗಳಿಗೂ ಬಳಸಲಾಗುತ್ತಿದೆ. ಮೊದಲೆಲ್ಲಾ ಸೋಪ್ ಬದಲು ಇದನ್ನೇ ಪಾತ್ರೆ ತೊಳೆಯುವುದಕ್ಕೆ ಬಳಸಲಾಗುತ್ತಿತ್ತು.
ತಲೆನೋವು ತಕ್ಷಣ ಶಮನವಾಗಬೇಕೆಂದ್ರೆ ಅರಶಿನದಿಂದ ಹೀಗೆ ಮಾಡಿ
ಇನ್ನು ಈ ಬೂದಿಗೆ ಸ್ವಲ್ಪ ನೀರು ಸೇರಿಸಿಕೊಂಡು ಗ್ಯಾಸ್ನ ಗ್ಲಾಸ್ ತಿಕ್ಕಿದರೆ ಫಳ ಫಳ ಎಂದು ಹೊಳೆಯುತ್ತದೆ.
ಹಾಗೇ ಬೆಳ್ಳಿಯ ಪಾತ್ರೆಗೆ ಇದನ್ನು ಹಾಕಿಕೊಂಡು ಉಜ್ಜುವುದರಿಂದ ಪಾಲಿಶ್ ಮಾಡಿದ ರೀತಿ ಇರುತ್ತದೆ.
ಇನ್ನು ಜಿಡ್ಡಿನಂಶವನ್ನೂ ಕೂಡ ಇದು ಸುಲಭವಾಗಿ ತೆಗೆದು ಹಾಕುತ್ತದೆ. ಹಾಗೇ ಈ ಬೂದಿಗೆ ಸ್ವಲ್ಪ ನೀರು ಸೇರಿಸಿ ಕಲೆಯಾದ ಜಾಗದಲ್ಲಿ ಉಜ್ಜುವುದರಿಂದ ಕಲೆ ಕೂಡ ಬೇಗನೆ ಹೋಗುತ್ತದೆ.