alex Certify ಪಾಪ್ ಗಾಯಕಿಯನ್ನು ಟೀಕಿಸಲು ಹೋಗಿ ಟ್ರೋಲಾದ ಕಂಗನಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಪ್ ಗಾಯಕಿಯನ್ನು ಟೀಕಿಸಲು ಹೋಗಿ ಟ್ರೋಲಾದ ಕಂಗನಾ…!

ರೈತರ ಪ್ರತಿಭಟನೆ ಸಂಬಂಧ ಧ್ವನಿ ಎತ್ತಿದ ಪಾಪ್​ ಗಾಯಕಿ ರಿಹನ್ನಾ ಭಾರತೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ರೆ ರಿಹನ್ನಾರಿಗೆ ರಿ ಟ್ವೀಟ್​ ಮಾಡಲು ಹೋಗಿ ಬಾಲಿವುಡ್​ ನಟಿ ಕಂಗನಾ ರಣಾವತ್​ ನಗೆಪಾಟಲಿಗೆ ಗುರಿಯಾಗಿದ್ದಾರೆ.

ಹರಿಯಾಣದಲ್ಲಿ ಇಂಟರ್ನೆಟ್​ ವ್ಯವಸ್ಥೆ ಬಂದ್​ ಮಾಡಿದ ಬಗ್ಗೆ ಸಿಎನ್​ಎನ್​ ನೀಡಿದ ವರದಿಯನ್ನ ಶೇರ್​ ಮಾಡಿ ಟ್ವೀಟ್​ ಮಾಡಿದ್ದ ರಿಹನ್ನಾ ನಾವೇಕೆ ಇದರ ಬಗ್ಗೆ ಮಾತನಾಡುತ್ತಿಲ್ಲ..? ಎಂದು ಪ್ರಶ್ನೆ ಮಾಡಿದ್ದರು.

ರಿಹನ್ನಾರ ಈ ಟ್ವೀಟ್​ ಕೆಲವೇ ಗಂಟೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಅಲ್ಲದೇ ಅನೇಕ ಸ್ಟಾರ್​ ಸೆಲೆಬ್ರಿಟಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕಾರಣಿಗಳು ಈಕೆಯ ಟ್ವೀಟ್​ಗೆ ರಿ ಟ್ವೀಟ್ ಕೂಡ ಮಾಡಿದ್ದರು. ಇತ್ತ ಕಂಗನಾ ಕೂಡ ಇದೇ ವಿಚಾರವಾಗಿ ರಿ ಟ್ವೀಟ್​ ಮಾಡಿ ಪಾಪ್​ ಗಾಯಕಿಯನ್ನ ಮೂರ್ಖಿ ಅಂತಲೂ ಪ್ರತಿಭಟನಾ ನಿರತ ರೈತರನ್ನ ಉಗ್ರರು ಎಂದು ಜರಿದಿದ್ದಾರೆ.

ಯಾರು ಕೂಡ ಈ ವಿಚರವಾಗಿ ಏಕೆ ಮಾತನಾಡ್ತಿಲ್ಲ ಅಂದರೆ ಪ್ರತಿಭಟನಾನಿರತರ್ಯಾರೂ ರೈತರಲ್ಲ ಬದಲಾಗಿ ಉಗ್ರರಾಗಿದ್ದಾರೆ. ಅವರು ಭಾರತವನ್ನ ಇಬ್ಭಾಗ ಮಾಡೋಕೆ ಹೊರಟಿದ್ದಾರೆ. ಒಡೆದು ಚೂರಾದ ಭಾರತವನ್ನ ವಶಕ್ಕೆ ತೆಗೆದುಕೊಂಡು ಅಮೆರಿಕದಲ್ಲಿ ಮಾಡಿದಂತೆಯೇ ಚೀನಾ ಚೈನೀಸ್​ ಕಾಲೋನಿಗಳನ್ನ ನಿರ್ಮಾಣ ಮಾಡುವ ಪ್ಲಾನ್​ನಲ್ಲಿದೆ. ಮೂರ್ಖಿ ನೀನು ಸುಮ್ಮನೇ ಇರು. ನಿಮ್ಮಂತೆ ನಾವು ದೇಶ ಮಾರುವವರಲ್ಲ ಎಂದು ಕಂಗನಾ ಟ್ವೀಟಾಯಿಸಿದ್ದಾರೆ.

ಕಂಗನಾ ಈ ರೀತಿ ಟ್ವೀಟ್​ ಮಾಡಿದ್ದೇ ತಡ ನೆಟ್ಟಿಗರು ಆಕೆಯ ಕಾಲೆಳೆಯೋಕೆ ಶುರು ಮಾಡಿದ್ದಾರೆ. ಕೆಲವರು ಸಿಂಹಿಣಿ ವಾಪಸ್ಸಾಗಿದೆ ಎಂದು ಹೇಳಿದ್ರೆ.. ಇನ್ನೊಬ್ಬ ಟ್ವೀಟಿಗ, ಸಹೋದರಿ, ನಿನ್ನ ಬಗ್ಗೆ ಬಹಳ ಹೆಚ್ಚಾಗಿಯೇ ಭಾವಿಸಿಕೊಳ್ಳುತ್ತಿದ್ದೀಯಾ. ಪಾಪ್​ ಗಾಯಕಿಗೆ ನಿನ್ನಂತ ಒಬ್ಬ ವ್ಯಕ್ತಿ ಭೂಮಿ ಮೇಲೆ ಇದ್ದಾರೆ ಅನ್ನೋದು ಗೊತ್ತಿರಲಿಕ್ಕಿಲ್ಲ ಎಂದು ಬರೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...