ನೀವು ಎಂದಿಗೂ ಮದ್ಯ ವ್ಯಸನವನ್ನೇ ಮಾಡಿರೋದಿಲ್ಲ. ಆದರೆ ನಿಮ್ಮ ದೇಹದಲ್ಲಾದ ಕೆಲ ಬದಲಾವಣೆಗಳಿಂದಾಗಿ ನಿಮಗೆ ಯಕೃತ್ತಿನ ಕಸಿಗೆ ಒಳಗಾಗುವಂತ ಪರಿಸ್ಥಿತಿ ಬರುತ್ತೆ ಅನ್ನೋದನ್ನ ಊಹಿಸಿಕೊಳ್ಳೋಕೆ ಸಾಧ್ಯವೇ..?ಇಂತಹ ಘಟನೆಗಳು ಸಿನಿಮಾದಲ್ಲೋ ಇಲ್ಲವೇ ಕಾದಂಬರಿಯಲ್ಲಿ ಮಾತ್ರ ನಡೆಯೋಕೆ ಸಾಧ್ಯ ಎಂದುಕೊಳ್ಳಬಹುದು.
ಆದರೆ ಆಟೋ ಬ್ರೇವರಿ ಸಿಂಡ್ರೋಮ್ ಬಂದ ವ್ಯಕ್ತಿ ಮಾತ್ರ ನಿಜವಾಗಿಯೂ ಈ ಸಮಸ್ಯೆಯನ್ನ ಎದುರಿಸುತ್ತಾರೆ. ಅಮೆರಿಕದ ತಾಯಿಯೊಬ್ಬಳು ಇದೇ ರೀತಿಯ ಕಾಯಿಲೆಗೆ ಒಳಗಾಗಿದ್ದು ಆಕೆಗೀಗ ಯಕೃತ್ತಿನ ಕಸಿಯ ಅವಶ್ಯಕತೆ ಇದೆ.
ಮನೆ ಕೆಲಸಕ್ಕೆ ಬಂದ ಯುವತಿಯೊಂದಿಗೆ ಸಂಬಂಧ ಬೆಳೆಸಿ ಮಗು ಕೊಟ್ಟ ಮಾಲೀಕ
ಸಾರಾ ಲೆಫೆಬ್ವ್ರೆ ಮದ್ಯ ವ್ಯಸನಿಯೇ ಆಗಿರಲ್ಲ. ಆದರೆ ಆಕೆಯ ಯಕೃತ್ತಿನ ಅವ್ಯವಸ್ಥೆ ಕಂಡ ವೈದ್ಯರೂ ಕೂಡ ಈಕೆ ಮದ್ಯಪಾನಿ ಎಂದೇ ತಪ್ಪು ತಿಳಿದಿದ್ದರು. ಆಕೆಯ ದೇಹದಲ್ಲಿ ಎಥೆನಾಲ್ ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿತ್ತು. ಈ ಎಥೆನಾಲ್ ಆಕೆಯ ರಕ್ತಕ್ಕೆ ಹೋಗುತ್ತಿತ್ತು. ಈ ಅಪರೂಪದ ಲಕ್ಷಣದಿಂದಾಗಿ ಆಕೆ ಒಮ್ಮೊಮ್ಮೆ ಮದ್ಯಪಾನಿಯಂತೆ ವರ್ತಿಸುತ್ತಿದ್ದಳು.
ಇದನ್ನೆಲ್ಲಾ ನೋಡಿದ ವೈದ್ಯರು ಆಕೆ ಮದ್ಯಪಾನಿ ಎಂದೆ ಭಾವಿಸಿದ್ದರು. ಆದರೆ ಬಳಿಕ ಆಕೆ ಆಟೋ ಬ್ರೇವರಿ ಸಿಂಡ್ರೋಮ್ನಿಂದ ಬಳಲುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೇ ಇದೀಗ ಆಕೆಗೆ ಯಕೃತ್ತಿನ ಕಸಿಯ ಅವಶ್ಯಕತೆ ಇದೆ.