alex Certify ಡಾನ್ಸ್ ಮಾಡುತ್ತಿದ್ದಾಕೆಗೆ ತನ್ನ ಹಿಂದೆ ನಡೆಯುತ್ತಿದ್ದ ಬೆಳವಣಿಗೆಯ ಕಿಂಚಿತ್ತೂ ಗಮನವಿರಲಿಲ್ಲ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾನ್ಸ್ ಮಾಡುತ್ತಿದ್ದಾಕೆಗೆ ತನ್ನ ಹಿಂದೆ ನಡೆಯುತ್ತಿದ್ದ ಬೆಳವಣಿಗೆಯ ಕಿಂಚಿತ್ತೂ ಗಮನವಿರಲಿಲ್ಲ…!

ನೈಪಿಥ್ವಾ: ವರ್ಕೌಟ್ ಮಾಡುತ್ತಿದ್ದರೆ ಹಲವರಿಗೆ ಸುತ್ತಲಿನ ಜ್ಞಾನವೇ ಇರದು. ಆಕೆಗೂ ಹಾಗೇ ಆಗಿದ್ದು ಏರೋಬಿಕ್ ಮಾಡುವಾಗ ದೊಡ್ಡ ಯುದ್ಧ ಟ್ಯಾಂಕರ್ ಬಂದರೂ ಗೊತ್ತಾಗಲಿಲ್ಲ.!!!

ಮ್ಯಾನ್ಮಾರ್ ರಾಜಧಾನಿ ನೈಪಿತ್ವಾದ ಸಂಸತ್ ಭವನದ ಎದುರು ಬೆಳಗ್ಗೆ ಯುವತಿಯೊಬ್ಬಳು ಮ್ಯೂಸಿಕ್ ಹಾಕಿಕೊಂಡು ವರ್ಕೌಟ್ ಮಾಡುವ ವಿಡಿಯೋ ವೈರಲ್ ಆಗಿದೆ. ಆಕೆಯೇ ಅಪ್ಲೋಡ್ ಮಾಡಿದ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಗಳು ಬರುತ್ತಿವೆ.

ʼನೈಕ್ʼ ಕಂಪನಿಯ ಹ್ಯಾಂಡ್ ಫ್ರೀ ಶೂ ಬಿಡುಗಡೆ ಹಿಂದಿದೆ ಹೃದಯಸ್ಪರ್ಶಿ ಕಥೆ

ಕಿಂಗ್ ಹನಿನ್ ವೈ ಎಂಬ 26 ವರ್ಷದ ಶಾಲಾ‌ ದೈಹಿಕ ಶಿಕ್ಷಣ ಪರಿವೀಕ್ಷಕಿಯ ವಿಡಿಯೋ ಇದಾಗಿದೆ. ಆಕೆ ಇಂಡೋನೇಷ್ಯಾದ ಪ್ರಸಿದ್ಧ ಹಾಡು ಅಂಪುಲ್ ಬೆಂಗ್ ಜೊಂಗ್ ಅನ್ನು ಕೇಳುತ್ತಾ ಡಾನ್ಸ್ ಮಾಡಿದ್ದಾಳೆ. ಹಿಂದೆ ಸೇನೆಯ ಯುದ್ಧ ಟ್ಯಾಂಕರ್ ಗಳು, ಹೆಲಿಕ್ಯಾಪ್ಟರ್ ತೆರಳುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಆದರೆ, ಈಕೆಗೆ ಇದಾವುದೂ ತಿಳಿದೇ ಇಲ್ಲ. ಬಳಿಕ ಡಾನ್ಸ್ ಮಾಡಿದ ವಿಡಿಯೋವನ್ನು ವೀಕ್ಷಣೆ ಮಾಡಿದಾಗ ಈ ವಿಷಯ ಗಮನಕ್ಕೆ ಬಂದಿದೆ.

https://www.facebook.com/permalink.php?story_fbid=1569642986562975&id=100005518668726

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...