2021-22ರ ವಿತ್ತೀಯ ವರ್ಷಕ್ಕೆ ಘೋಷಿಸಲಾದ ಬಜೆಟ್ನಲ್ಲಿ ಆದಾಯ ತೆರಿಗೆ ಸ್ಲಾಬ್ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದರೂ ಸಹ ನೇರ ತೆರಿಗೆ ಸಂಬಂಧ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿರುವ ಘೋಷಣೆಗಳು ವೈಯಕ್ತಿಕ ತೆರಿಗೆ ಪಾವತಿದಾರರ ಮೇಲೆ ಪರಿಣಾಮ ಬೀರಲಿವೆ.
ಸಂಬಳ ಪಡೆಯುವ ತೆರಿಗೆ ಪಾವತಿದಾರ ವರ್ಗದವರ ಪಿಎಫ್ ಹಾಗೂ ಪೂರ್ವ-ಭರಿತ ಆದಾಯ ತೆರಿಗೆ ಫಾರಂಗಳ ಮೇಲಿನ ತೆರಿಗೆಯಿಂದ ಗೃಹ ನಿರ್ಮಾಣ ಕ್ಷೇತ್ರದವರೆಗೂ ಪರಿಣಾಮ ಬೀರಲಿರುವ ಅನೇಕ ಬದಲಾವಣೆಗಳು ಹೊಸ ವಿತ್ತೀಯ ವರ್ಷದಿಂದ ಜಾರಿಗೆ ಬರಲಿವೆ.
* ಏಪ್ರಿಲ್ 1, 2021ರಿಂದ ಅನ್ವಯವಾಗುವಂತೆ ವಾರ್ಷಿಕ 2.5 ಲಕ್ಷ ರೂ.ಗೂ ಹೆಚ್ಚಿನ ಪಿಎಫ್ಅನ್ನು ಇಪಿಎಫ್ಓಗೆ ಭರಿಸಿದಲ್ಲಿ, ಆ ನಿಧಿ ಮೇಲಿನ ಬಡ್ಡಿಯ ಮೇಲೆ ತೆರಿಗೆ ಅನ್ವಯವಾಗಲಿದೆ.
* 2020-21ರ ವಿತ್ತೀಯ ವರ್ಷಕ್ಕೆ ಅನ್ವಯವಾಗುವಂತೆ, ನಗದಿನ ರೂಪದಲ್ಲಿ ರಜೆಯ ಮೇಲೆ ಪ್ರವಾಸಕ್ಕೆ ತೆರಳಿದಾಗ ಸಿಗುವ ವಿನಾಯಿತಿ (ಎಲ್ಟಿಸಿ) ಮೇಲಿನ ತೆರಿಗೆಯನ್ನು ತೆಗೆದುಹಾಕಲಾಗಿದೆ. ನಿಗದಿತ ಮೊತ್ತದ ಮೂರನೇ ಒಂದಂಶ ಅಥವಾ ಪ್ರತಿ ವ್ಯಕ್ತಿಗೂ ಗರಿಷ್ಠ 36,000 ರೂ.ಗಳವರೆಗೂ ಈ ವಿನಾಯಿತಿ ಅನ್ವಯವಾಗುತ್ತದೆ.
ಮುಷ್ಕರದ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಭರವಸೆ ನೀಡಿದ ಸರ್ಕಾರ: ಸಾರಿಗೆ ನೌಕರರ ಬೇಡಿಕೆ ಈಡೇರಿಸುತ್ತೇವೆಂದ ಸಚಿವ
* ಪೂರ್ವ-ಭರಿತವಾದ ರಿಟರ್ನ್ಸ್ಗಳು ಆದಾಯ ತೆರಿಗೆ ಪೋರ್ಟಲ್ನಲ್ಲಿ ಸಿಗಲಿವೆ. ಇದರಲ್ಲಿ ವೇತನ, ಟಿಡಿಎಸ್, ತೆರಿಗೆ ಪಾವತಿ ವಿವರಗಳು ಮೊದಲೇ ಇರಲಿದ್ದು, ತೆರಿಗೆ ಪಾವತಿಯನ್ನು ಇನ್ನಷ್ಟು ಸರಳಗೊಳಿಸಲು ಅನುವು ಮಾಡಲಾಗಿದೆ. ಜೊತೆಯಲ್ಲಿ ಮನ್ನಣೆ ಪಡೆದ ಸೆಕ್ಯೂರಿಟಿಗಳ ಮೇಲೆ ಹಾಕುವ ಬಂಡವಾಳಗಳ ಮೇಲಿನ ಲಾಭಾಂಶ, ಡಿವಿಡೆಂಡ್ ಆದಾಯ, ಅಂಚೆ ಕಾರ್ಯಾಲಯ/ಬ್ಯಾಂಕುಗಳಿಂದ ಸಿಗುವ ಬಡ್ಡಿಗಳ ವಿವರಗಳೂ ಸಹ ಈ ಅರ್ಜಿಗಳಲ್ಲಿ ಪೂರ್ವ-ಭರಿತವಾಗಿರಲಿವೆ.
* ಮಾರ್ಚ್ 31, 2022ರ ವರೆಗೂ ಅನ್ವಯವಾಗುವಂತೆ, ಕೈಗೆಟುಕುವ ದರದಲ್ಲಿ ಆಗಬಲ್ಲಂಥ ಗೃಹ ಖರೀದಿಗೆಂದು ಮಾಡಲಾದ ಸಾಲಗಳ ಮೇಲಿನ ಬಡ್ಡಿಯ ಮೇಲಿನ ಹೆಚ್ಚುವರಿ ಕಡಿತಕ್ಕೆ ಅಗತ್ಯವಾದ ಕನಿಷ್ಠ ಕಾಲಮಿತಿಯನ್ನು ಹೆಚ್ಚಿಸುವ ವಿಷಯವನ್ನು ವಿತ್ತ ಸಚಿವರು ಪ್ರಸ್ತಾಪಿಸಿದ್ದಾರೆ. ಬಾಡಿಗೆ ಮನೆಗಳ ಯೋಜನೆಗಳ ಮೇಲೆ ಹೊಸ ತೆರಿಗೆಗಳಿಂದ ವಿನಾಯಿತಿ ಕೊಡುವ ಮೂಲಕ ವಲಸೆ ಕಾರ್ಮಿಕರಿಗೆ ಬಾಡಿಗೆ ಮನೆಗಳ ಲಭ್ಯತೆಯನ್ನು ಖಾತ್ರಿ ಪಡಿಸುವ ಘೋಷಣೆಯನ್ನೂ ವಿತ್ತ ಸಚಿವೆ ಮಾಡಿದ್ದಾರೆ.
* ಉದ್ಯೋಗಿಗಳ ಭಾಗದ ಪಿಎಫ್ ಭಾಗವನ್ನು ತಡವಾಗಿ ಪಾವತಿ ಮಾಡಿದಲ್ಲಿ, ಅದನ್ನು ಉದ್ಯೋಗದಾತರ ತೆರಿಗೆ ಸಹಿತ ಆದಾಯಕ್ಕೆ ಸೇರಿಸುವ ಪ್ರಸ್ತಾಪನೆಯನ್ನು ವಿತ್ತ ಸಚಿವೆ ಇಟ್ಟಿದ್ದಾರೆ.
ಈ ಮೂಲಕ ಪಿಎಫ್ ಕೊಡುಗೆ ಮೇಲೆ ಸಿಗುವ ಬಡ್ಡಿಯಲ್ಲಿ ಉದ್ಯೋಗಿಗಳಿಗೆ ಯಾವುದೇ ಕಡಿತವಾಗುವುದಿಲ್ಲ ಎಂಬ ಖಾತ್ರಿಯೊಂದಿಗೆ, ಅವರಿಗೆ ತಮ್ಮ ಪಿಎಫ್ ಹಣ ಸಿಗುವ ಭರವಸೆ ಇನ್ನಷ್ಟು ಹೆಚ್ಚಲಿದೆ ಎನ್ನಲಾಗಿದೆ.