ಕೊರೊನಾ ವೈರಸ್ ಅನೇಕರ ಕೆಲಸದ ಮೇಲೆ ಪ್ರಭಾವ ಬೀರಿದೆ. ಬಹಳಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಉದ್ಯೋಗ ಬಿಟ್ಟು ಫ್ರೀಲಾನ್ಸರ್ ರೂಪದಲ್ಲಿ ಕೆಲಸ ಮಾಡ್ತಿದ್ದಾರೆ. ಫ್ರೀಲಾನ್ಸರ್ ರೀತಿಯಲ್ಲಿ ಕೆಲಸ ಮಾಡ್ತಿರುವವರು ಕ್ಲೈಂಟ್ ನಿಂದ ಪಡೆದ ಮೊತ್ತಕ್ಕೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ತೆರಿಗೆಯನ್ನು ಲಾಭದ ಆಧಾರದ ಮೇಲೆ ನೀಡಬೇಕಾಗುತ್ತದೆ.
ಫ್ರೀಲಾನ್ಸರ್ ಆಗಿ ನೀವು ಕೆಲಸ ಮಾಡ್ತಿದ್ದು, ಯಾವುದೇ ವಸ್ತುಗಳ ಖರೀದಿ ಅಥವಾ ಮಾರಾಟ ಮಾಡದೆ ಹೋದಲ್ಲಿ ನಿಮ್ಮನ್ನು ವೃತ್ತಿಪರರೆಂದು ಪರಿಗಣಿಸಲಾಗುತ್ತದೆ. ವ್ಯಾಪಾರ ಅಥವಾ ವೃತ್ತಿಪರರು 25 ಲಕ್ಷಕ್ಕಿಂತ ಹೆಚ್ಚು ರೂಪಾಯಿಗಳ ರಶೀದಿ ಹೊಂದಿದ್ದರೆ ನೀವು ಅಕೌಂಟ್ ಸಿದ್ಧಪಡಿಸಬೇಕಾಗುತ್ತದೆ. ನೀವು ಹೊಸಬರಾಗಿದ್ದರೆ ಮೊದಲ ವರ್ಷದ ಆದಾಯವನ್ನು ಇದು ಅವಲಂಭಿಸಿರುತ್ತದೆ.
ಯಾವುದೇ ಒಂದು ಹಣಕಾಸಿನ ವರ್ಷದಲ್ಲಿ ನಿಗದಿಗಿಂತ ಹೆಚ್ಚು ಆದಾಯ ಗಳಿಸಿದ್ದರೆ ಅದಕ್ಕೆ ತೆರಿಗೆ ಪಾವತಿ ಮಾಡಬೇಕು. ವ್ಯವಹಾರಕ್ಕೆ ಇದ್ರ ಮಿತಿ 1 ಕೋಟಿಯಾಗಿದ್ದರೆ ವೃತ್ತಿಗೆ 50 ಲಕ್ಷ ರೂಪಾಯಿಯಾಗಿರುತ್ತದೆ. ಸೆಕ್ಷನ್ 80 ಸಿ ಅಡಿಯಲ್ಲಿ ಲಭ್ಯವಿರುವ ವಿನಾಯಿತಿಯನ್ನೂ ನೀವು ಪಡೆಯಬಹುದು. ಹಾಗೆ ಪ್ರತಿ ತ್ರೈಮಾಸಿಕದಲ್ಲಿ ಮುಂಗಡ ತೆರಿಗೆ ಪಾವತಿಸಬೇಕಾಗುತ್ತದೆ. ಫ್ರೀಲಾನ್ಸರ್ ಆಗಿದ್ದರೂ ನಿಯಮಿತವಾಗಿ ಜಿಎಸ್ಟಿ ಹಾಗೂ ತೆರಿಗೆ ಪಾವತಿ ಮಾಡಬೇಕಾಗುತ್ತದೆ.