‘ರೈತರೊಂದಿಗೆ ಯುದ್ಧಕ್ಕೆ ಇಳಿದಿದ್ದೀರಾ….? ’: ಪ್ರಧಾನಿ ಮೋದಿಗೆ ಕಾಂಗ್ರೆಸ್ ಪ್ರಶ್ನೆ 02-02-2021 1:24PM IST / No Comments / Posted In: Latest News, India ಕೇಂದ್ರದ ಕೃಷಿ ಮಸೂದೆ ಜಾರಿಯಾದಾಗಿನಿಂದ ದೇಶದ ರೈತರು ದೆಹಲಿಯಲ್ಲಿ ಸುದೀರ್ಘ ಪ್ರತಿಭಟನೆಯನ್ನ ನಡೆಸುತ್ತಲೇ ಇದ್ದಾರೆ. ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರದ ಬಳಿಕ ಬಹುತೇಕ ಪ್ರದೇಶಗಳಲ್ಲಿ ಸರ್ಕಾರ ಇಂಟರ್ನೆಟ್ ಸೇವೆಯನ್ನೂ ರದ್ದು ಮಾಡಿದೆ. ಇದನ್ನ ಖಂಡಿಸಿ ರೈತರು ಫೆಬ್ರವರಿ ಆರರಂದು ರಸ್ತೆ ತಡೆಗೆ ಕರೆ ನೀಡಿದ್ದಾರೆ. ಕೃಷಿ ಮಸೂದೆ ವಿಚಾರವಾಗಿ ಬಿಜೆಪಿಯ ನಿಲುವನ್ನ ಪ್ರಶ್ನಿಸುತ್ತಲೇ ಬಂದಿರುವ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಗೆ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ ಇಂದೂ ಸಹ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿ ರೈತರ ವಿರುದ್ಧ ಯುದ್ಧಕ್ಕೆ ಇಳಿದಿದ್ದಾರೆಯೇ..? ಎಂದು ಟ್ವೀಟಾಯಿಸಿದ್ದಾರೆ. ಗೌರವಾನ್ವಿತ ಪ್ರಧಾನ ಮಂತ್ರಿಗಳೇ, ನೀವು ರೈತರೊಂದಿಗೆ ಯುದ್ದಕ್ಕೆ ಇಳಿದಿದ್ದೀರೇ..? ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ದೆಹಲಿ ಗಡಿಯಲ್ಲಿ ಭದ್ರತೆಯನ್ನ ಹೆಚ್ಚಿಸಿರುವ ವಿಡಿಯೋವನ್ನೂ ಪ್ರಿಯಾಂಕಾ ಶೇರ್ ಮಾಡಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ಸೇತುವೆ ನಿರ್ಮಾಣ ಮಾಡಿ ಗೋಡೆಯನ್ನಲ್ಲ ಎಂದು ಕಿವಿಮಾತನ್ನ ಹೇಳಿದ್ದರು. प्रधानमंत्री जी, अपने किसानों से ही युद्ध? pic.twitter.com/gn2P90danm — Priyanka Gandhi Vadra (@priyankagandhi) February 2, 2021