ರೈತರ ಪ್ರತಿಭಟನೆ ಹಾಗೂ ಕೃಷಿ ಮಸೂದೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಸುಳ್ಳು ಸುದ್ದಿಯನ್ನ ಬಿತ್ತರಿಸುತ್ತಿದ್ದ ರಾಜಸ್ಥಾನದ ಚುರು ಜಿಲ್ಲೆಯ ಓಂ ಪ್ರಕಾಶ್ ಧೇತರ್ವಾಲ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಕಿಸಾನ್ ಆಂದೋಲನ್ ರಾಜಸ್ಥಾನ ಎಂಬ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿ ಮಾಡಿಕೊಂಡಿದ್ದ ಈತ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಎನ್ನಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ರಾಜಸ್ಥಾನ ಸೈಬರ್ ಕ್ರೈಂ ವಿಭಾಗದ ಉಪ ಕಮಿಷನರ್ ಅಲ್ವೇಶ್ ರಾಯ್, ಬಂಧಿತ ಆರೋಪಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೋಮಾ ಮಾಡಿದ್ದಾನೆ. ಅಪರಾಧ ಕೃತ್ಯಕ್ಕೆ ಈತ ಬಳಸಿಕೊಂಡಿದ್ದ ಎಲ್ಲಾ ಸಾಧನಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಂದು ಹೇಳಿದ್ರು.
ಈ ಮಧ್ಯೆ ದೆಹಲಿಯಲ್ಲಿ 200 ಪೊಲೀಸರಿಂದ ಸಾಮೂಹಿಕ ರಾಜೀನಾಮೆ ಎಂಬ ವಿಚಾರವಾಗಿ ಸುಳ್ಳು ಸುದ್ದಿ ಹರಡಿದ್ದ ರಾಜಸ್ಥಾನದ ಭರತ್ಪುರದ ವ್ಯಕ್ತಿಯನ್ನೂ ಪೊಲೀಸರು ಬಂಧಿಸಿದ್ದಾರೆ.