ಗರ್ಭಿಣಿಯೊಬ್ಬಳು ಆರ್ಮಿ ಆಂಬುಲೆನ್ಸ್ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ನಡೆದಿದೆ. ಹರಿಗೆಯಾದ ಬಳಿಕ ತಾಯಿ ಹಾಗೂ ಮಗುವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗರ್ಭಿಣಿಯೊಬ್ಬಳು ಹೆರಿಗೆ ನೋವಿನಿಂದ ಬಳಲುತ್ತಿರೋದ್ರ ಬಗ್ಗೆ ಆಶಾ ಕಾರ್ಯಕರ್ತೆಯೊಬ್ಬರು ಕಲರೂಸ್ ಕಂಪನಿ ಕಮಾಂಡರ್ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ ಸಿಕ್ಕಾಪಟ್ಟೆ ಹಿಮಪಾತ ಆಗ್ತಿರೋದ್ರಿಂದ ಆಂಬುಲೆನ್ಸ್ನ್ನು ಕಳುಹಿಸಿಕೊಡಲು ಸಾಧ್ಯವಾಗಲಿಲ್ಲ.
ಮಗಳನ್ನು ಹುಡುಕಿಕೊಡವಂತೆ ಕೇಳಿದ ಮಹಿಳೆಗೆ ಪೊಲೀಸರು ಹೇಳಿದ್ದೇನು ಗೊತ್ತಾ…?
ಕೂಡಲೇ ಗರ್ಭಿಣಿಯಿದ್ದ ಜಾಗಕ್ಕೆ ಆರ್ಮಿ ವಾಹನವನ್ನ ಕಳುಹಿಸಿಕೊಡಲಾಯ್ತು. ಆರ್ಮಿ ವಾಹನ ಗರ್ಭಿಣಿಯನ್ನ ಕರೆದುಕೊಂಡು ಆಸ್ಪತ್ರೆಗೆ ಹೋಗುತ್ತಿದ್ದ ಮಾರ್ಗ ಮಧ್ಯೆದಲ್ಲೇ ಮಹಿಳೆಗೆ ಹೆರಿಗೆ ನೋವು ಜೋರಾಗಿದೆ. ಹೀಗಾಗಿ ಆಶಾ ಕಾರ್ಯಕರ್ತೆ ನೀಡಿದ ಸೂಚನೆಯ ಮೇರೆಗೆ ಆರ್ಮಿ ಗಾಡಿಯನ್ನ ಅಲ್ಲೇ ರಸ್ತೆ ಬಳಿಸಿ ನಿಲ್ಲಿಸಿ ಹೆರಿಗೆ ಮಾಡಿಸಲಾಗಿದೆ. ಆರ್ಮಿ ವೈದ್ಯಕೀಯ ತಂಡದ ನೆರವಿನಿಂದ ಹೆರಿಗೆ ಸುರಕ್ಷಿತವಾಗಿ ನಡೆದಿದ್ದು ತಾಯಿ ಹಾಗೂ ಮಗು ಇಬ್ಬರೂ ಕ್ಷೇಮವಾಗಿದ್ದಾರೆ ಎನ್ನಲಾಗಿದೆ.