ಉತ್ತರ ಪ್ರದೇಶ ಕಾನ್ಪುರ ಜಿಲ್ಲೆಯ ಪೊಲೀಸರು ದಿವ್ಯಾಂಗ ಮಹಿಳೆಯ ಬಳಿ ಡಿಸೇಲ್ಗೆ ಹಣ ಕೇಳಿದ್ದಾರೆ ಎಂಬ ಆರೋಪ ಎದುರಾಗಿದೆ.
ಮಗಳನ್ನ ಕಳೆದುಕೊಂಡಿದ್ದ ದಿವ್ಯಾಂಗ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆದರೆ ನಿನ್ನ ಮಗಳನ್ನ ಹುಡುಕಿ ಕೊಡಬೇಕು ಅಂದರೆ ಡಿಸೇಲ್ಗೆ ಹಣ ಬೇಕು ಎಂದು ಹೇಳುವ ಮೂಲಕ ಬಡ ಮಹಿಳೆಯ ಬಳಿ 15000 ರೂಪಾಯಿ ಹಣ ಪೀಕಿರುವ ಆರೋಪ ಕೇಳಿ ಬಂದಿದೆ.
ಗುಡಿಯಾ ಎಂಬ ಹೆಸರಿನ ಮಹಿಳೆ ಕಾನ್ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ವಿಧವೆ ಆಗಿರುವ ಈ ಮಹಿಳೆ ಅಂಗವಿಕಲೆ ಕೂಡ ಹೌದು. ನನ್ನ ಮಗಳನ್ನ ಹುಡುಕಿಕೊಡಿ ಎಂದು ಕೇಳಿದ್ರೆ ಪೊಲೀಸರು ಸರಿಯಾಗಿ ಸಾಥ್ ನೀಡ್ತಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ.
ಠಾಣೆಗೆ ನನ್ನ ಮಗಳ ಬಗ್ಗೆ ವಿಚಾರಿಸಿಲು ಬಂದಾಗ ಕೆಲ ಸಿಬ್ಬಂದಿ ಇಲ್ಲಿಂದ ತೊಲಗು ಎಂದು ನಿಂದಿಸಿದ್ದಾರೆ. ನಾನು ಎಂದಿಗೂ ಪೊಲೀಸರಿಗೆ ಲಂಚ ನೀಡಿಲ್ಲ. ಆದರೆ ಮೂರ್ನಾಲ್ಕು ಬಾರಿ ಡೀಸೆಲ್ ಖರ್ಚಿಗೆಂದು ಹಣ ನೀಡಿದ್ದೇನೆ. ಈ ಚೌಕಿಯಲ್ಲಿ ಇಬ್ಬರು ಪೊಲೀಸರಿದ್ದಾರೆ. ಅದರಲ್ಲಿ ಒಬ್ಬರು ಸಹಾಯ ಮಾಡ್ತಾರೆ. ಇನ್ನೊಬ್ಬರು ನನ್ನನ್ನ ನಿಂದಿಸಿದ್ದಾರೆ ಎಂದು ಹೇಳಿದ್ದಾಳೆ.
ರೈತರ ಹೋರಾಟಕ್ಕೆ ವಿಶೇಷ ಬೆಂಬಲ ನೀಡಿದ ನವದಂಪತಿ…!
ನಾನು ಸಂಬಂಧಿಕರ ಬಳಿ ಸಾಲ ಮಾಡಿಕೊಂಡು ಬಂದು ಪೊಲೀಸರಿಗೆ ಹಣ ನೀಡಿದ್ದೇನೆ. ನಾನು ಈಗಾಗಲೇ 10 ರಿಂದ 15 ಸಾವಿರ ರೂಪಾಯಿ ಖಾಲಿ ಮಾಡಿದ್ದೇನೆ. ಆದರೆ ಇದೇ ರೀತಿ ಎಷ್ಟು ದಿನ ಅಂತಾ ನಾನು ಹಣ ತರಲಿ ಎಂದು ಅಳಲನ್ನ ತೋಡಿಕೊಂಡಿದ್ದಾಳೆ.