ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ವಿದೇಶಿ ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳ ಮಾಡಲಾಗಿದೆ.
ಸ್ವದೇಶಿ ವಸ್ತುಗಳಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದ್ದ ಅನೇಕ ವಿದೇಶಿ ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಈಗಾಗಲೇ ಅನೇಕ ವಸ್ತುಗಳಿಗೆ ಅನ್ವಯವಾಗುತ್ತಿದ್ದ ಆಮದು ಸುಂಕವನ್ನು ಹಲವು ಸ್ತರದಲ್ಲಿ ಹೆಚ್ಚಳ ಮಾಡಲಾಗಿದೆ.
ಅಂದ ಹಾಗೆ, ಮೊಬೈಲ್ ಬಿಡಿಭಾಗಗಳು, ಚಾರ್ಜರ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಆಮದು ಸುಂಕ ಶೇಕಡ 2.5 ರಷ್ಟು ಹೆಚ್ಚಳ ಮಾಡಲಾಗಿದೆ. ಕ್ಯಾಮೆರಾ ಮಾಡ್ಯೂಲ್, ಚಾರ್ಜರ್, ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಮೊದಲಾದವುಗಳಿಗೆ ಬಳಸುವಮೋಲ್ಡೆಡ್ ಪ್ಲಾಸ್ಟಿಕ್ ಮೇಲೆ ಈಗಾಗಲೇ ಚಾಲ್ತಿಯಲ್ಲಿದ್ದ ಆಮದು ಸುಂಕ ಶೇಕಡ 10 ರಿಂದ 15 ಕ್ಕೆ ಏರಿಕೆ ಮಾಡಲಾಗಿದೆ. ಈ ಕಾರಣದಿಂದ ಮೊಬೈಲ್ ದುಬಾರಿಯಾಗಲಿದೆ ಎಂದು ಹೇಳಲಾಗಿದೆ.