ಬೋರ್ಡ್ ಪರೀಕ್ಷೆಯ ವೇಳಾ ಪಟ್ಟಿಗಾಗಿ ಕಾಯ್ತಿರುವ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿಯಿದೆ. ಸಿಬಿಎಸ್ಇ 10 ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿಯನ್ನು ನಾಳೆ ಬಿಡುಗಡೆ ಮಾಡಲಿದೆ. ವಿದ್ಯಾರ್ಥಿಗಳು cbse.nic.in ಅಧಿಕೃತ ವೆಬ್ಸೈಟ್ ನಲ್ಲಿ ವೇಳಾ ಪಟ್ಟಿಯನ್ನು ಪರೀಕ್ಷಿಸಬಹುದಾಗಿದೆ.
ಸಿಬಿಎಸ್ಇಯ 10ನೇ ಮತ್ತು 12ನೇ ತರಗತಿಯ ಪರೀಕ್ಷೆ ದಿನಾಂಕ ಈಗಾಲೇ ಘೋಷಣೆಯಾಗಿದೆ. 10ನೇ ಮತ್ತು 12ನೇ ತರಗತಿ ಪರೀಕ್ಷೆ ಮೇ.1ರಿಂದ ಶುರುವಾಗಲಿದೆ. ಪ್ರಾಯೋಗಿಕ ಪರೀಕ್ಷೆಗಳು ಮಾರ್ಚ್ 1ರಿಂದ ಶುರುವಾಗಲಿದೆ. ಪರೀಕ್ಷೆ ದಿನಾಂಕವನ್ನು ಡಿಸೆಂಬರ್ 31ರಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಘೋಷಣೆ ಮಾಡಿದ್ದರು. ಫೆಬ್ರವರಿ 2ರಂದು ವೇಳಾಪಟ್ಟಿ ಬಿಡುಗಡೆಯಾಗಲಿದ್ದು, ಯಾವ ದಿನಾಂಕದಂದು ಯಾವ ಪರೀಕ್ಷೆ ನಡೆಯಲಿದೆ ಎಂಬುದು ಸ್ಪಷ್ಟವಾಗಲಿದೆ.
ಮತ್ತೊಬ್ಬ ಹುಡುಗಿ ಮೇಲೆ ಕ್ರಶ್ ಆಗಿದೆ ಎಂದಿದ್ದಕ್ಕೆ 2ನೇ ತರಗತಿ ವಿದ್ಯಾರ್ಥಿನಿಯನ್ನು ಉಚ್ಚಾಟಿಸಿದ ಶಾಲೆ
ವಿದ್ಯಾರ್ಥಿಗಳು cbse.nic.in ಅಧಿಕೃತ ವೆಬ್ಸೈಟ್ ಗೆ ಹೋಗಬೇಕು. ಮುಖಪುಟದಲ್ಲಿ ವೇಳಾಪಟ್ಟಿ ಲಿಂಕ್ ಕ್ಲಿಕ್ ಮಾಡಬೇಕು. ನಂತ್ರ ವಿದ್ಯಾರ್ಥಿಗಳು ತರಗತಿಯನ್ನು ಆರಿಸಬೇಕು. ನಂತ್ರ ವೇಳಾಪಟ್ಟಿ ಪಿಡಿಎಫ್ ಫೈಲ್ ಡೌನ್ಲೋಡ್ ಮಾಡಬಹುದು. 10 ಮತ್ತು 12ನೇ ತರಗತಿ ಪರೀಕ್ಷೆ ಫಲಿತಾಂಶ ಜುಲೈ 15ರಂದು ಹೊರಬರಲಿದೆ.