ಪ್ರೇಮಿಗಳು ತಮ್ಮ ಪ್ರೇಮವನ್ನ ನಿವೇದನೆ ಮಾಡಿಕೊಂಡ ದಿನವನ್ನ ವಿಶೇಷವಾಗಿ ಆಚರಿಸೋದೇನು ಹೊಸ ವಿಚಾರವಲ್ಲ.ಈ ದಿನ ಒಬ್ಬರಿಗೊಬ್ಬರು ಸಪ್ರೈಸ್ ಕೋಡೋದೂ ಇದೆ. ಆದರೆ ಇದೇ ಸಪ್ರೈಸ್ ಒಮ್ಮೊಮ್ಮೆ ನಮಗೆ ಉಲ್ಟಾ ಹೊಡೆಯುತ್ತೆ ಅನ್ನೋಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಜೋಡಿಯ ಕತೆಯೇ ಸಾಕ್ಷಿ.
ಸಾಲ್ಮಾ ಎಂಬ ಮಹಿಳೆ ತಮ್ಮ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ದಿನ ನಡೆದ ಕತೆಯನ್ನ ವಿವರಿಸಿದ್ದು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಸಲ್ಮಾ ತನ್ನ ಬಾಯ್ಫ್ರೆಂಡ್ಗೆ ಸಪ್ರೈಸ್ ನೀಡಬೇಕೆಂದು ಬಯಸಿದ್ದಳು.
ಹೀಗಾಗಿ ತನ್ನ ಪ್ರಿಯತಮ ವಾಸವಿದ್ದ ಸ್ಕಾಟ್ಲೆಂಡ್ನ ಎಡಿಂಗ್ಬರ್ಗ್ಗೆ ತೆರಳಿದ್ದಾಳೆ. ಆದರೆ ವಿಚಿತ್ರ ಅಂದ್ರೆ ಆತ ಕೂಡ ಆಕೆಗೆ ಸಪ್ರೈಸ್ ಕೊಡಬೇಕೆಂದು ಆಕೆ ವಾಸವಿದ್ದ ಪ್ಯಾರಿಸ್ಗೆ ಹಾರಿದ್ದ. ಆಕೆ ಕೂಡಲೇ ವಾಪಸ್ಸಾಗುವಂತೆ ಹೇಳಿದ್ದಾಳೆ.
ಆದರೆ ಅದು ಸಾಧ್ಯವಾಗಲಿಲ್ಲ. 12 ಗಂಟೆ ಅವಧಿ ಒಳಗಾಗಿ ಆತನಿಗೆ ಒಂದೇ ಒಂದು ವಿಮಾನ ಸಿಕ್ಕಿಲ್ಲ. ಹೀಗಾಗಿ ಆತ ಫೇಸ್ಬುಕ್ನಲ್ಲಿ ಪರಿಚಯಸ್ಥರು ಯಾರಾದರೂ ಪ್ಯಾರೀಸ್ನಲ್ಲಿದ್ದರೆ ನನಗೆ ಟೈಮ್ ಪಾಸ್ ಮಾಡೋಕೆ ನೆರವಾಗಿ ಎಂದು ಕೇಳಿಕೊಂಡಿದ್ದಾನೆ.
ಸಾಲ್ಮಾ ತನ್ನ ಬಾಯ್ಫ್ರೆಂಡ್ ಫೇಸ್ಬುಕ್ ಪೋಸ್ಟ್ನ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾಳೆ.