![](https://kannadadunia.com/wp-content/uploads/2020/12/184151-petrol.jpg)
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021ರ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಆಧಾರದ ಮೇಲೆ ಈ ವರ್ಷ ಯಾವ ವಸ್ತು ಬೆಲೆ ಹೆಚ್ಚಾಗಲಿದೆ, ಯಾವ ವಸ್ತು ಬೆಲೆ ಇಳಿಕೆಯಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ.
ಚರ್ಮದ ಉತ್ಪನ್ನ, ಡ್ರೈ ಕ್ಲೀನಿಂಗ್, ಕಬ್ಬಿಣದ ಉತ್ಪನ್ನ, ಬಣ್ಣ, ಉಕ್ಕಿನ ಪಾತ್ರೆ, ವಿಮೆ, ವಿದ್ಯುತ್, ಶೂ, ನೈಲಾನ್, ಚಿನ್ನ, ಬೆಳ್ಳಿ, ಪಾಲಿಯೆಸ್ಟರ್, ತಾಮ್ರದ ಸರಕು, ಕೃಷಿ ಉಪಕರಣಗಳು 2021ರಲ್ಲಿ ಅಗ್ಗವಾಗಲಿದೆ.
ಹಿರಿಯ ನಾಗರಿಕರಿಗೆ ಬಿಗ್ ರಿಲೀಫ್ ನೀಡಿದ ಕೇಂದ್ರ ಸರ್ಕಾರ
ಮೊಬೈಲ್ ಮತ್ತು ಮೊಬೈಲ್ ಚಾರ್ಜರ್, ಹತ್ತಿ ಬಟ್ಟೆ, ಎಲೆಕ್ಟ್ರಾನಿಕ್ ಸರಕು, ರತ್ನ, ಚರ್ಮದ ಬೂಟ್, ಸೇಬು ಹಣ್ಣು, ಕಡಲೆ, ಯೂರಿಯಾ, ಡಿಎಪಿ ಗೊಬ್ಬರ, ಪೆಟ್ರೋಲ್-ಡಿಸೇಲ್ ದುಬಾರಿಯಾಗಲಿದೆ. ಆಲ್ಕೋಹಾಲ್ ಮೇಲೆ ಶೇಕಡಾ 100ರಷ್ಟು ಸೆಸ್ ವಿಧಿಸಲಾಗುವುದು. ಹಾಗಾಗಿ ಆಲ್ಕೋಹಾಲ್, ಬಿಯರ್ ಬೆಲೆ ದುಬಾರಿಯಾಗಲಿದೆ.