alex Certify ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಶಾಕ್:‌ ಮತ್ತೆ ಏರಿಕೆಯಾಗಲಿದೆ ಪೆಟ್ರೋಲ್‌ – ಡಿಸೇಲ್‌ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಶಾಕ್:‌ ಮತ್ತೆ ಏರಿಕೆಯಾಗಲಿದೆ ಪೆಟ್ರೋಲ್‌ – ಡಿಸೇಲ್‌ ಬೆಲೆ

ಕೇಂದ್ರ ಬಜೆಟ್​ 2021-22ರಲ್ಲಿ ಪೆಟ್ರೋಲ್​ ಹಾಗೂ ಡಿಸೇಲ್​ಗಳ ದರವನ್ನ ಏರಿಕೆ ಮಾಡಲಾಗಿದೆ. ಹಾಗೂ ಈ ಪರಿಷ್ಕೃತ ದರವು ಮೂರ್ನಾಲ್ಕು ದಿನಗಳೊಳಗಾಗಿ ಜಾರಿಗೆ ಬರಲಿದೆ.

ಪ್ರತಿ ಲೀಟರ್​ ಪೆಟ್ರೋಲ್​ ದರ 2.5 ರೂಪಾಯಿ ಹಾಗೂ ಡಿಸೇಲ್​ ಪ್ರತಿ ಲೀಟರ್​ಗೆ 4 ರೂಪಾಯಿ ಏರಿಕೆ ಮಾಡಲಾಗಿದೆ.

ಕೃಷಿ ಸೆಸ್​ಗಳ ಅಡಿಯಲ್ಲಿ ಈ ಪೆಟ್ರೋಲ್ ಹಾಗೂ ಡಿಸೇಲ್​ಗಳ ದರ ಏರಿಕೆಯಾಗಿದೆ.

ಈ ಏರಿಕೆಯಾದ ಹಣದಿಂದ ಸಂಗ್ರಹವಾದ ಆದಾಯವು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬಳಕೆಯಾಗಲಿದೆ.

ಸ್ಕ್ರ್ಯಾಪ್ ನೀತಿ ಎಂದ್ರೇನು….? ಜನ ಸಾಮಾನ್ಯರ ಮೇಲೆ ಹೇಗೆ ಪ್ರಭಾವ ಬೀರಲಿದೆ ಸ್ಕ್ರ್ಯಾಪ್ ನೀತಿ

ಇನ್ನುಳಿದಂತೆ ವಿದೇಶಿ ಮದ್ಯದ ಮೇಲೂ ಶೇ.100 ರಷ್ಟು ಕೃಷಿ ಸೆಸ್​ ವಿಧಿಸಲಾಗಿದೆ. ರಾಸಾಯನಿಕ ಗೊಬ್ಬರ ಹಾಗೂ ಯೂರಿಯಾ​ಗಳ ಮೇಲೆ ಶೇಕಡಾ 5ರಷ್ಟು ಸೆಸ್​, ಪಾಮ್​ ಆಯಿಲ್​ ಮೇಲೆ ಶೇ.17.5 ರಷ್ಟು ಕೃಷಿ ಸೆಸ್​, ಸನ್​ ಫ್ಲವರ್​ ಹಾಗೂ ಸೋಯಾಬಿನ್​ ಎಣ್ಣೆಯ ಮೇಲೆ ಶೇ.20 ರಷ್ಟು ಕೃಷಿ ಸೆಸ್​, ಚಿನ್ನ ಬೆಳ್ಳಿಯ ಮೇಲೂ 2.5 ಶೇ. ಕೃಷಿ ಸೆಸ್​ ವಿಧಿಸಲಾಗಿದೆ. ಇದು ಮಾತ್ರವಲ್ಲದೇ ಬೇಳೆಕಾಳುಗಳ ಮೇಲೂ ಕೃಷಿ ಸೆಸ್​ ಹಾಕಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಈ ಸೆಸ್​ಗಳು ಜಾರಿಗೆ ಬರಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...