ದೇಶದಲ್ಲಿ ಜವಳಿ ಉತ್ಪಾದನೆ ಹೆಚ್ಚಳ ಹಾಗೂ ರಫ್ತು ಉತ್ತೇಜಿಸಲು ಬಜೆಟ್ ನಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 7 ಮೆಗಾ ಜವಳಿ ಪಾರ್ಕ್ ನಿರ್ಮಾಣದ ಘೋಷಣೆ ಮಾಡಿದ್ದಾರೆ. ಭಾರತ ಜವಳಿ ರಫ್ತು ದೇಶವಾಗಲಿ ಎಂಬ ಉದ್ದೇಶದಿಂದ ಈ ಘೋಷಣೆ ಮಾಡಲಾಗಿದ್ದು, ಮೂರು ವರ್ಷಗಳಲ್ಲಿ ಮೆಗಾ ಜವಳಿ ಪಾರ್ಕ್ ನಿರ್ಮಾಣವಾಗಲಿದೆ.
ಜವಳಿ ಸಚಿವಾಲಯ ಮೆಗಾ ಇಂಟಿಗ್ರೇಟೆಡ್ ಜವಳಿ ಮತ್ತು ಉಡುಪು ಪಾರ್ಕ್ ಸ್ಥಾಪನೆ ಪ್ರಸ್ತಾಪವಿಟ್ಟಿತ್ತು. ಜವಳಿ ಉದ್ಯಮದ ವ್ಯವಹಾರವನ್ನು 22 ಸಾವಿರ ಕೋಟಿಗೆ ಹೆಚ್ಚಿಸುವುದು ಜವಳಿ ಸಚಿವಾಲಯದ ಉದ್ದೇಶವಾಗಿದೆ. ಇಂಟಿಗ್ರೇಟೆಡ್ ಟೆಕ್ಸ್ಟೈಲ್ ಪಾರ್ಕನ್ನು ಸರ್ಕಾರ 2005ರಲ್ಲಿ ಪ್ರಾರಂಭಿಸಿದೆ. ಅಂತರರಾಷ್ಟ್ರೀಯ ಮಾನದಂಡಗಳ ಆಧಾರದ ಮೇಲೆ, ಅನೇಕ ಕಾರ್ಖಾನೆಗಳನ್ನು ಸ್ಥಾಪಿಸಲು ಒಂದೇ ಸ್ಥಳದಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಕೇಂದ್ರ ಬಜೆಟ್ 2021: ಸ್ವಚ್ಛ ಭಾರತ ಮಿಷನ್ಗೆ 1.41 ಲಕ್ಷ ರೂಪಾಯಿ ಮೀಸಲು
ಈ ಕ್ಷೇತ್ರದಲ್ಲಿ 11 ಕೋಟಿ ಜನರು ಕೆಲಸ ಮಾಡ್ತಿದ್ದಾರೆ. ಕೊರೊನಾದಿಂದಾಗಿ ಜವಳಿ ಉದ್ಯಮದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅನೇಕರು ಕೆಲಸ ಕಳೆದಕೊಂಡಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ಈಗ 7 ಮೆಗಾ ಜವಳಿ ಪಾರ್ಕ್ ಘೋಷಣೆ ಮಾಡಿದ್ದು,ಲಕ್ಷಾಂತರ ಮಂದಿಗೆ ಕೆಲಸ ಸಿಗುವ ಸಾಧ್ಯತೆಯಿದೆ.