ಕೇಂದ್ರ ವಿತ್ತ ಸಚಿವೆ 2021-22ನೇ ಸಾಲಿನ ಕೇಂದ್ರ ಬಜೆಟ್ನ್ನು ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಕೊರೊನಾ ಹಾಗೂ ಆರ್ಥಿಕ ಸಂಕಷ್ಟಗಳನ್ನ ಗಮನದಲ್ಲಿಟ್ಟುಕೊಂಡು 5 ಸ್ತಂಭಗಳ ಆಧಾರದಲ್ಲಿ ಬಜೆಟ್ ಮಂಡನೆ ಮಾಡಲಾಗ್ತಿದೆ.
ಮೋದಿ 2.0 ಸರ್ಕಾರದ ಮೂರನೇ ಬಜೆಟ್ ಇದಾಗಿದೆ. ಈ ಬಾರಿಯ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನ ನೀಡಲಾಗಿದೆ. 115 ತುರ್ತು ಶಸ್ತ್ರ ಚಿಕಿತ್ಸಾ ಕೇಂದ್ರ ನಿರ್ಮಾಣ ಘೋಷಣೆ, ಹೊಸ ಗ್ರಾಮೀಣ ಆರೋಗ್ಯ ಕೇಂದ್ರಗಳ ನಿರ್ಮಾಣ, 602 ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, 4 ವೈರಾಲಿಜಿ ಇನ್ಸ್ಟಿಟ್ಯೂಟ್ಗಳ ಸ್ಥಾಪನೆ, 5 ಹೊಸ ರೋಗ ನಿಯಂತ್ರಣ ಕೇಂದ್ರಗಳ ನಿರ್ಮಾಣ ಸೇರಿದಂತೆ ಆರೋಗ್ಯ ಸೇವೆಗಳ ಮೇಲಿನ ಹೂಡಿಕೆ ಹೆಚ್ಚಿಸುವ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ಕೊರೊನಾ ಲಸಿಕೆಗೆ ಬಜೆಟ್ನಲ್ಲಿ 35 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಅಲ್ಲದೇ ಅವಶ್ಯಕತೆ ಬಿದ್ದರೆ ಇನ್ನೂ ಹೆಚ್ಚಿನ ಹಣವನ್ನ ಕೇಂದ್ರ ಸರ್ಕಾರ ನೀಡಲಿದೆ. ದೇಶದಲ್ಲಿ 2 ಸ್ವದೇಶಿ ನಿರ್ಮಿತ ಕೊರೊನಾ ಲಸಿಕೆ ಬಳಕೆಯಾಗ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ರು.