ಅನೇಕ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಆಕರ್ಷಿಸಲು ಅಗ್ಗದ ಯೋಜನೆಗಳನ್ನು ಜಾರಿಗೆ ತರ್ತಿವೆ.
ಪ್ರತಿ ಕಂಪನಿಯು ಗ್ರಾಹಕರಿಗೆ ಅನುಕೂಲವಾಗುವ ಯೋಜನೆಗಳನ್ನು ಬಿಡುಗಡೆ ಮಾಡ್ತಿವೆ. ಏರ್ಟೆಲ್, ಬಿಎಸ್ಎನ್ಎಲ್ ಮತ್ತು ಜಿಯೋಗಳ ಅಗ್ಗದ ರೀಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಕಂಪನಿಗಳ ಅಗ್ಗದ ಯೋಜನೆ 11 ರೂಪಾಯಿಗೆ ಲಭ್ಯವಿದೆ.
ಸರ್ಕಾರಿ ಟೆಲಿಕಾಂ ಕಂಪನಿ ಬಿ ಎಸ್ ಎನ್ ಎಲ್ ನ ಅಗ್ಗದ ಯೋಜನೆ ಕೇವಲ 19 ರೂಪಾಯಿಗೆ ಲಭ್ಯವಿದೆ. ಬಿಎಸ್‌ಎನ್‌ಎಲ್‌ನ ಡಬ್ಡ್ ಮಿನಿ_19 ಯೋಜನೆಯಲ್ಲಿ ಗ್ರಾಹಕರಿಗೆ 1 ಜಿಬಿ ಡೇಟಾ ಸಿಗಲಿದೆ. ಇದರ ಸಿಂಧುತ್ವ ಕೇವಲ ಒಂದು ದಿನ. ಇನ್ನು ವೊಡಾಫೋನ್-ಐಡಿಯಾ (ವಿ) ಯ ಅಗ್ಗದ ರೀಚಾರ್ಜ್ ಯೋಜನೆ ಕೇವಲ 16 ರೂಪಾಯಿಗಳಿಗೆ ಲಭ್ಯವಿದೆ. ಈ ಯೋಜನೆಯಲ್ಲಿ ಬಳಕೆದಾರರು 1ಜಿಬಿ ಮೊಬೈಲ್ ಇಂಟರ್ನೆಟ್ ಡೇಟಾವನ್ನು ಪಡೆಯುತ್ತಾರೆ. ಇದರ ಸಿಂಧುತ್ವ 24 ಗಂಟೆ.
ಟೆಲಿಕಾಂ ಕಂಪನಿ ಏರ್ಟೆಲ್‌ನ ಅಗ್ಗದ ರೀಚಾರ್ಜ್ ಯೋಜನೆ ಬೆಲೆ 48 ರೂಪಾಯಿ. ಇದು ಏರ್ಟೆಲ್‌ನ ಅಗ್ಗದ ಯೋಜನೆಯಾಗಿರಬಹುದು ಆದರೆ ಇತರ ಕಂಪನಿಗಳು ನೀಡುವ ಕೊಡುಗೆಗಳಿಗೆ ಹೋಲಿಸಿದರೆ ಇದು ತುಂಬಾ ದುಬಾರಿಯಾಗಿದೆ. ಈ ಯೋಜನೆಯಲ್ಲಿ ಗ್ರಾಹಕರು 3 ಜಿಬಿ ಡೇಟಾವನ್ನು ಪಡೆಯುತ್ತಾರೆ. ಇದರ ಸಿಂಧುತ್ವ 28 ದಿನಗಳು.
ಬಿಗ್ ನ್ಯೂಸ್: ಕೊರೊನಾ ಲಸಿಕೆಗೆ 35 ಸಾವಿರ ಕೋಟಿ ರೂ. ಮೀಸಲು
ಜಿಯೋ ಕಡಿಮೆ ದರದಲ್ಲಿ ರೀಚಾರ್ಜ್ ಯೋಜನೆಯನ್ನು ನೀಡುತ್ತಿದೆ. ಕಂಪನಿಯ ಈ ಅಗ್ಗದ ಯೋಜನೆಯಲ್ಲಿ ಗ್ರಾಹಕರಿಗೆ 1 ಜಿಬಿ ಡೇಟಾ ಸಿಗುತ್ತದೆ. ವಿ 48 ರೂಪಾಯಿ ರೀಚಾರ್ಜ್ ಯೋಜನೆಯನ್ನು ಸಹ ಹೊಂದಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 3 ಜಿಬಿ ಡೇಟಾ ಸಿಗುತ್ತದೆ. ಈ ಯೋಜನೆಯ ಸಿಂಧುತ್ವವು 28 ದಿನಗಳು.