ಸರ್ವೋದಯ ದಿನದಂದು ಮಹಾತ್ಮ ಗಾಂಧಿಯ ಹಂತಕ ನಾಥೂರಾಮ್ ಗೋಡ್ಸೆಯ ಪರ ಟ್ವೀಟ್ ಮಾಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ನೆಟ್ಟಿಗರು ಕಾಲೆಳೆದಿದ್ದಾರೆ.
ಎಲ್ಲ ಕಥೆಗಳಿಗೂ ಮೂರು ಭಾಗಗಳಿರುತ್ತವೆ. ನನ್ನದೊಂದು ಭಾಗವಾದರೆ, ನಿಮ್ಮದೊಂದು ಭಾಗ. ಮತ್ತೊಂದು ಭಾಗ ಸತ್ಯವಾಗಿರುತ್ತದೆ. ಒಬ್ಬ ಉತ್ತಮ ಕತೆ ಹೇಳುವವ ಸತ್ಯವನ್ನು ಹೇಳುತ್ತಾನೆ ಅಥವಾ ಮುಚ್ಚಿಡುತ್ತಾನೆ. ಹೀಗಾಗಿಯೇ ನಮ್ಮ ಪಠ್ಯ ಪುಸ್ತಕಗಳಲ್ಲಿ ನಾಥೂರಾಮ್ ಗೋಡ್ಸೆಯನ್ನು ಬೇರೆ ರೀತಿ ಬಿಂಬಿಸಲಾಗಿದೆ ಎಂದು ಕಂಗನಾ ಟ್ವೀಟ್ ಮಾಡಿದ್ದರು.
ಇದಿಷ್ಟೇ ಅಲ್ಲದೆ, ಕಳೆದ ಅಕ್ಟೋಬರ್ ನಲ್ಲಿ ಕೂಡ ಸರ್ದಾರ್ ವಲ್ಲಭಬಾಯಿ ಪಟೇಲರನ್ನು ಹೊಗಳುವ ಭರದಲ್ಲಿ ಗಾಂಧೀಜಿಯನ್ನ ಪರೋಕ್ಷವಾಗಿ ತೆಗಳಿ ಪೋಸ್ಟ್ ಮಾಡಿದ್ದರು.
ಜ್ಯೂನಿಯರ್ ಚಿರುಗೆ ಮೊದಲ ಪೋಲಿಯೋ ಡ್ರಾಪ್ಸ್- ಫೋಟೋ ಹಂಚಿಕೊಂಡ ಮೇಘನಾ ರಾಜ್
ಎರಡೂ ಪೋಸ್ಟ್ ಗಳಿಗೆ ನೆಟ್ಟಿಗರು ತಿರುಗೇಟುಗಳನ್ನು ನೀಡಿದ್ದು, ಗೋಡ್ಸೆಯನ್ನು ಭಯೋತ್ಪಾದಕ ಎಂದು ವ್ಯಾಖ್ಯಾನಿಸಿದ್ದಾರೆ.
ಸರ್ದಾರ್ ವಲ್ಲಭಬಾಯಿ ಪಟೇಲರು ಈ ದೇಶದ ಮೊದಲ ಪ್ರಧಾನಿ ಆಗಬೇಕಿತ್ತು. ದುರ್ಬಲ ಮನಸ್ಸಿನ, ಹೇಳಿದಂತೆ ಕೇಳುವ ನೆಹರು ಅಂತಹವರು ಗಾಂಧಿಗೆ ಬೇಕಿತ್ತು. ಹೀಗಾಗಿ ಜವಾಹರ್ ಲಾಲ್ ನೆಹರು ಪ್ರಧಾನಿ ಆದರು. ಇದರಿಂದ ಪಟೇಲರಿಗೆ ಯಾವ ನಷ್ಟವೂ ಆಗಲಿಲ್ಲ. ದಶಕಗಳ ಕಾಲ ಈ ದೇಶ ನಷ್ಟ ಅನುಭವಿಸಿತು ಎಂದು ನಟಿ ಕಂಗನಾ ಟ್ವೀಟ್ ಮಾಡಿದ್ದರು.
https://twitter.com/KanganaTeam/status/1355483992477335555?ref_src=twsrc%5Etfw%7Ctwcamp%5Etweetembed%7Ctwterm%5E1355483992477335555%7Ctwgr%5E%7Ctwcon%5Es1_&ref_url=https%3A%2F%2Fwww.indiatimes.com%2Fentertainment%2Fcelebs%2Fon-her-tweet-glorifying-mahatma-gandhis-assasin-nathuram-godse-kangana-ranaut-gets-trolled-533263.html