ಭೂಮಿಯ ಇತಿಹಾಸದ ಅಧ್ಯಯನದಲ್ಲಿ ಡೈನೋಸಾರ್ ಗಳ ಪಳೆಯುಳಿಕೆಗಳ ಅಧ್ಯಯನ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿ ವರ್ಷವೂ ಸಹ ಜಗತ್ತಿನ ವಿವಿಧ ಭಾಗಗಳಲ್ಲಿ ಡೈನೋಸಾರ್ ಗಳ ಪಳೆಯುಳಿಕೆಗಳನ್ನು ತಜ್ಞರು ಶೋಧಿಸುತ್ತಲೇ ಬಂದಿದ್ದಾರೆ. ಆದರೆ ಆಡುವ ಮಗುವೊಂದು ಡೈನೋಸಾರ್ ಹೆಜ್ಜೆ ಗುರುತುಗಳನ್ನು ಪತ್ತೆ ಮಾಡುವುದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ.
ವೇಲ್ಸ್‌ನ ಕಡಲ ತೀರದಲ್ಲಿ ಆಡುತ್ತಿದ್ದ ನಾಲ್ಕು ವರ್ಷದ ಬಾಲಕಿಯೊಬ್ಬಳಿಗೆ 220 ದಶಲಕ್ಷ ವರ್ಷದಷ್ಟು ಹಳೆಯದಾದ ಡೈನೋಸಾರ್ ನ ಹೆಜ್ಜೆ ಗುರುತುಗಳು ಕಾಣಿಸಿವೆ. ಈ ದೈತ್ಯ ಜೀವಿಗಳು ಹೇಗೆ ನಡೆಯುತ್ತಿದ್ದವು ಎಂದು ಅಧ್ಯಯನ ಮಾಡಲು ಈ ಶೋಧ ಬಹಳ ನೆರವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಬಾತುಕೋಳಿ ರಕ್ಷಿಸಲು ತೆರಳಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಕಾದಿತ್ತು ʼಅಚ್ಚರಿʼ
ಇಲ್ಲಿನ ಬ್ಯಾರಿ ಬಳಿಯ ಬೆಂಡ್ರಿಕ್ಸ್ ಬೇ ಎಂಬ ಜಾಗದಲ್ಲಿ, ತನ್ನ ತಂದೆಯೊಂದಿಗೆ ವಾಕಿಂಗ್ ಹೊರಟಿದ್ದ ನಾಲ್ಕು ವರ್ಷದ ಬಾಲಕಿ ಲಿಲಿ ವೀಲ್ಡರ್‌ಗೆ ಈ ಹೆಜ್ಜೆ ಗುರುತುಗಳು ಸಿಕ್ಕಿವೆ.
ಹೆಜ್ಜೆ ಗುರುತಿನ ಪ್ರಿಂಟ್ ಕೇವಲ 10 ಸೆಂಮೀ ಉದ್ದವಿದ್ದು, ಕೇವಲ 75 ಸೆಂಮೀ ಎತ್ತರವಿರುವ ಡೈನೋಸಾರ್ ನ ಹೆಜ್ಜೆ ಗುರುತು ಇದಾಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
https://www.instagram.com/p/CKof2IvLXV5/?utm_source=ig_web_copy_link