ಅಮೆರಿಕದ ಜಾರ್ಜಿಯಾ ರಾಜ್ಯದ ಡೆಕಾಲ್ಬ್ ಕೌಂಟಿಯಲ್ಲಿ ವಾಸಿಸುತ್ತಿರುವ ಕುಟುಂಬವೊಂದು ಕೂದಲೆಳೆಯ ಅಂತರದಲ್ಲಿ ಡೆಡ್ಲಿ ಅಫಘಾತದಿಂದ ಪಾರಾಗಿದೆ.
ಮನೆಯ ಛಾವಣಿಯ ಮೇಲೆ ಮರದ ಕೊಂಬೆಯೊಂದು ಕುಸಿದು, ಒಳಗೆ ಮಲಗಿದ್ದ ಮಗುವಿನ ಪಕ್ಕದಲ್ಲೇ ಬಿದ್ದಿದೆ. ಮರದ ಕೊಂಬೆ ಬಿದ್ದ ಸದ್ದು ಕೇಳಿದ ತಾಯಿ ಆಶ್ಲೀ ಜಾನ್ಸನ್ ತನ್ನ ಇಬ್ಬರೂ ಮಕ್ಕಳು ಸುರಕ್ಷಿತವಿದ್ದಾರಾ ಎಂದು ಪರಿಶೀಲನೆ ಮಾಡಲು ಕೂಡಲೇ ಧಾವಿಸಿದ್ದಾರೆ.
ಸಾಲ ಪಡೆಯದಿದ್ರೂ ಮನೆಗೆ ಬಂದ ನೋಟಿಸ್ ಕಂಡು ಪತ್ನಿಗೆ ಬಿಗ್ ಶಾಕ್
ತನ್ನ ನಾಲ್ಕು ವರ್ಷದ ಪುತ್ರ ಅಮಿಯಾಸ್ ಸೇಫಾಗಿದ್ದಿದ್ದನ್ನು ಕಂಡ ಆಶ್ಲೀ, ಕೂಡಲೇ ತನ್ನ ಒಂದು ವರ್ಷದ ಮತ್ತೊಂದು ಮಗು ಅಶಾಳ ಕೋಣೆಯತ್ತ ದೌಡಾಯಿಸಿದ್ದಾರೆ. ಬಹಳ ಪ್ರಾಯಾಸಪಟ್ಟು ಮಗುವಿನ ಕೋಣೆ ಪ್ರವೇಶಿಸಿದ ಆಶ್ಲೀ, ಮರವೊಂದು ಮಲಗಿದ್ದ ತನ್ನ ಮಗಳ ಮೇಲೆ ಕೆಲವೇ ಇಂಚುಗಳಷ್ಟು ಅಂತರದಲ್ಲಿ ಕೊಂಬೆ ಬಿದ್ದಿರುವುದನ್ನು ಕಂಡು ದಂಗು ಬಡಿದಿದ್ದಾರೆ.
ಅದೃಷ್ಟವಶಾತ್ ಆ ಮಗು ಯಾವುದೇ ಗಾಯಗಳಿಲ್ಲದೇ ಪಾರಾಗಿದೆ.