ಧಾರವಾಡ: ಬ್ಯಾಂಕರ್ಸ್‍ಗಳ ರಾಜ್ಯ ಮಟ್ಟದ ಸಮನ್ವಯ ಸಮಿತಿ(ಎಸ್.ಎಲ್.ಬಿ.ಸಿ)ಯು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವುದಕ್ಕಾಗಿ ಆರ್ಥಿಕ ವಂಚನೆ, ಬ್ಯಾಂಕ್ ಹೆಚ್ಚಿನ ಬಡ್ಡಿದರ ನೀಡುವ ಕುರಿತು ಮೋಸ ಮಾಡುವವರ ವಿರುದ್ಧ ದೂರು ಸಲ್ಲಿಸಲು ವಿನಂತಿಸಿದೆ.
ಠೇವಣಿದಾರರಿಗೆ ಹೆಚ್ಚಿನ ಬಡ್ಡಿಯ ದುರಾಸೆಯನ್ನು ಒಡ್ಡಿ, ದುಡಿದ ಹಣ ಹೂಡಿಕೆ ಮಾಡಿಸಿ, ಮೋಸ ಮಾಡಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಜಾಗರೂಕರಾಗಿ, ಈ ರೀತಿಯ ಪ್ರಕರಣಗಳು ಕಂಡು ಬಂದರೆ www.jagruti.kar.nic.in ವೆಬ್‍ಸೈಟ್ ಮೂಲಕ ದೂರು ದಾಖಲಿಸಬಹುದು ಎಂದು ಕರ್ನಾಟಕ ಸರ್ಕಾರ ವತಿಯಿಂದ ಬ್ಯಾಂಕರ್ಸ್‍ಗಳ ರಾಜ್ಯ ಮಟ್ಟದ ಸಮನ್ವಯ ಸಮಿತಿಯು ತಿಳಿಸಿದೆ.