ಬಾಗಲಕೋಟೆ: ಕಾಂಗ್ರೆಸ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮೈತ್ರಿ ಸರ್ಕಾರದಲ್ಲಿ ನನಗೆ ಯಾವುದೇ ಸ್ವಾತಂತ್ರ್ಯ ಇರಲಿಲ್ಲ. ನಾನು ಕ್ಲರ್ಕ್ ನಂತೆ ಇದ್ದೆ ಎಂದು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಮೈತ್ರಿ ಸರ್ಕಾರದಲ್ಲಿ ನಾನು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಯಾವುದೇ ಸ್ಥಿತಿ ಇರಲಿಲ್ಲ. ನಾನೊಬ್ಬ ಕ್ಲರ್ಕ್ ನಂತೆ ಕೆಲಸ ಮಾಡಬೇಕಿತ್ತು. ಒಂದು ಕಡೆ ಸಿದ್ದರಾಮಯ್ಯನವರ ಒತ್ತಡ, ಇನ್ನೊಂದೆಡೆ ನೀರಾವರಿ ಹಳೆ ಯೋಜನೆ ಮುಂದುವರೆಸಲು ಒತ್ತಡ. ಮತ್ತೊಂದು ಕಡೆ ರೈತರ ಸಾಲಮನ್ನಾ ಬಗ್ಗೆ ಬಿಜೆಪಿಯಿಂದ ಒತ್ತಡವಿತ್ತು ಎಂದಿದ್ದಾರೆ.
ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಎಫ್ಐಆರ್
ಇದೇ ವೇಳೆ ಜೆಡಿಎಸ್ ನವರು ಅವಕಾಶವಾದಿ ರಾಜಕಾರಣಿಗಳು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮೈತ್ರಿ ಸಂಬಂಧ ಮುಗಿದು ಹೋದ ಕಥೆ. ಮೈತ್ರಿಯಿಂದ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿರುವಾಗ ನಮ್ಮ ಬಗ್ಗೆ ಮತ್ಯಾಕೆ ಅವರು ಯೋಚಿಸುತ್ತಾರೆ. ನಾವು ಏನು ಮಾಡಿದರೆ ಅವರಿಗೇನು ಎಂದು ತಿರುಗೇಟು ನೀಡಿದ್ದಾರೆ.