ದೇಹ ತೂಕ ಕಡಿಮೆ ಮಾಡಲು ಹತ್ತಾರು ಟಿಪ್ಸ್ ಗಳು ಸಿಗುತ್ತವೆ.
ಅದೇ ದೇಹ ತೂಕವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ನಿಮಗೆ ಗೊತ್ತೇ?
ನಿತ್ಯ ಮೊಟ್ಟೆ, ಹಾಲು, ಬಾಳೆಹಣ್ಣು ಸೇವಿಸಿದರೂ ದಪ್ಪವಾಗುತ್ತಿಲ್ಲ ಎಂಬ ಕೊರಗು ನಿಮ್ಮದಾಗಿದ್ದರೆ ನೀವು ಅದನ್ನು ಸರಿಯಾದ ವಿಧಾನದಲ್ಲಿ ಸೇವಿಸುತ್ತಿಲ್ಲ ಎಂದೇ ಅರ್ಥ.
ಬಾಳೆಹಣ್ಣಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಮಿಕ್ಸಿಯನ್ನು ನುಣ್ಣಗೆ ಮಾಡಿಕೊಳ್ಳಿ. ಇದಕ್ಕೆ ಒಂದು ಲೋಟ ಹಾಲು ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿ. ಬಳಿಕ ತಿಂಡಿ ತಿನ್ನಿ. ಮಧ್ಯಾಹ್ನ ಊಟವಾದ ಬಳಿಕ ಮೊಸರಿಗೆ ಸಕ್ಕರೆ ಹಾಕಿ ತಿನ್ನಿ.
ಬೇಗ ತೂಕ ಇಳಿಸಿಕೊಳ್ಳಬೇಕೆನ್ನುವವರಿಗೆ ಈ ಪಾನೀಯ ಬೆಸ್ಟ್
ಸಂಜೆ ಸಾಧ್ಯವಾದರೆ ನೆನೆಸಿದ ಕಡಲೆ ಕಾಳು ಅಥವಾ ಬೇಯಿಸಿದ ಕಡಲೆಕಾಳನ್ನು, ಮೊಟ್ಟೆಯನ್ನು ಸೇವಿಸಿ. ರಾತ್ರಿ ಮಲಗುವ ಮುನ್ನ ಮರೆಯದೆ ಹಾಲನ್ನು ಕುಡಿಯಿರಿ. ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರವನ್ನೇ ಸೇವಿಸಿ. ಅನ್ನ, ಧಾನ್ಯ, ಮೊಸರು, ಬೆಣ್ಣೆ, ಕುಂಬಳಕಾಯಿ ಮತ್ತು ಸೂರ್ಯಕಾಂತಿ ಬೀಜ ಸೇವಿಸಿ. ಡ್ರೈ ಫ್ರುಟ್ ಕೂಡಾ ದೇಹ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.
ತೂಕ ಹೆಚ್ಚಿಕೊಳ್ಳಬೇಕು ಎಂಬ ಕಾರಣಕ್ಕೆ ವಿಪರೀತ ಸಿಹಿ, ಜಂಕ್ ಫುಡ್ ಸೇವಿಸುವ ತಪ್ಪನ್ನು ಮಾಡದಿರಿ. ಇದರಿಂದ ಬೊಜ್ಜು ಹೆಚ್ಚಬಹುದು. ಇದು ಮತ್ತೆ ಅರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಹಾಗಾಗಿ ಆರೋಗ್ಯಯುತ ಆಹಾರಗಳನ್ನೇ ಸೇವಿಸಿ.