ಅಂತರ್ಜಾಲದಲ್ಲಿ ಡಾನ್ಸಿಂಗ್ ವಿಡಿಯೋಗಳಿಗೆ ಏನೂ ಕೊರತೆ ಇಲ್ಲ. ಇಂಥದ್ದೇ ವಿಡಿಯೋವೊಂದರಲ್ಲಿ ಕೋಲ್ಕತ್ತಾದ ಹಿರಿಯ ದಂಪತಿಗಳಿಬ್ಬರು ಬಾಂಬೆ ವೈಕಿಂಗ್ಸ್ನ ’ವೋ ಚಲಿ ವೋ ಚಲಿ ದೇಖೋ ಪ್ಯಾರ್ ಕೀ ಗಲಿ’ ಹಾಡಿಗೆ ನೃತ್ಯ ಮಾಡುತ್ತಿರುವುದು ವೈರಲ್ ಆಗಿದೆ.
ಕಲಿಕೆಗೆ ವಯಸ್ಸಿನ ಮಿತಿಯಿಲ್ಲ: 50ರ ಆಸುಪಾಸಲ್ಲೂ ಹೊಸ ಕೌಶಲ್ಯ ಕಲಿತ ಜನ
ಹಾರ್ಡ್ ರಾಕ್ ಕೆಫೆಯಲ್ಲಿ 2000ನೇ ಇಸವಿಯ ಈ ಹಾಡಿಗೆ ಈ ವಯಸ್ಕ ದಂಪತಿಗಳು ಸ್ಟೆಪ್ ಹಾಕುತ್ತಿರುವ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಹಿರಿಯ ಜೀವಗಳ ಈ ಉತ್ಸಾಹಭರಿತ ನೃತ್ಯವನ್ನು @thebohobaalika ಎಂಬ ಬಳಕೆದಾರರೊಬ್ಬರು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://www.instagram.com/p/CKYLsDEpoGk/?utm_source=ig_web_copy_link