ಕೆಲ ದಿನಗಳ ಹಿಂದಷ್ಟೇ ಸಂತ್ರಸ್ತೆಯ ಪ್ಯಾಂಟ್ ಜಿಪ್ನ್ನು ಆರೋಪಿ ತೆಗೆದ್ರೆ ಅದು ಪೋಸ್ಕೋ ಕಾಯ್ದೆಯಡಿ ಬರಲ್ಲ ಎಂದು ತೀರ್ಪು ನೀಡಿದ ಬಾಂಬೆ ಹೈಕೋರ್ಟ್ ಜಡ್ಜ್ ಪುಶ್ಪಾ ವಿಜೇಂದ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧಕ್ಕೆ ಒಳಗಾಗ್ತಿದ್ದಾರೆ.
ಇದು ಮಾತ್ರವಲ್ಲದೇ ಇನ್ನೊಂದು ಪ್ರಕರಣದಲ್ಲಿ ಚರ್ಮ ಚರ್ಮ ತಾಕಿದರೆ ಮಾತ್ರ ಅದು ಲೈಂಗಿಕ ದೌರ್ಜನ್ಯ ಎಂದು ತೀರ್ಪನ್ನ ನೀಡಿದ್ದರು. ಎರಡು ಪ್ರತ್ಯೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿವಾದಾತ್ಮಕ ಆದೇಶಗಳ ಹಿನ್ನೆಲೆ ಸುಪ್ರೀಂ ಕೋರ್ಟ್ ಪುಷ್ಪಾರನ್ನು ಬಾಂಬೆ ಹೈಕೋರ್ಟ್ ಖಾಯಂ ನ್ಯಾಯಾಧೀಶರನ್ನಾಗಿ ಮಾಡುವ ಶಿಫಾರಸ್ಸನ್ನ ಸುಪ್ರೀಂ ಕೋರ್ಟ್ ಹಿಂತೆಗೆದುಕೊಂಡಿದೆ ಎನ್ನಲಾಗಿದೆ.
ಪಿಪಿಎಫ್ ಸೇರಿ ಈ ಮೂರು ಹೂಡಿಕೆಯಲ್ಲಿ ಸಿಗುತ್ತೆ ತೆರಿಗೆ ವಿನಾಯಿತಿ
ವಿದ್ಯಾರ್ಥಿಯ ತಾಯಿ ಮನೆಯಲ್ಲಿಲ್ಲದ ವೇಳೆ ಮನೆಗೆ ನುಗ್ಗಿದ ಆರೋಪಿ ಅಪ್ರಾಪ್ತೆಯ ಕೈಯನ್ನ ಹಿಡಿದು ಆಕೆಯ ಪ್ಯಾಂಟ್ ಜಿಪ್ ಬಿಚ್ಚಿಸಿದ್ದ. ಈ ಸಮಯಕ್ಕೆ ಸರಿಯಾಗಿ ಮನೆಗೆ ತಾಯಿ ಬರ್ತಿದ್ದಂತೆ ಆತ ಓಡಿಹೋಗಿದ್ದ. ಈ ಸಂಬಂಧ ವಿಚಾರಣೆ ನಡೆಸಿದ್ದ ಕೆಳಹಂತದ ನ್ಯಾಯಾಲಯ ಈತನಿಗೆ ಪೋಸ್ಕೋ ಕಾಯ್ದೆಯಡಿ 5 ವರ್ಷಗಳ ಸಜೆ ಹಾಗೂ 25000 ರೂಪಾಯಿ ದಂಡ ವಿಧಿಸಿತ್ತು.
ಈ ತೀರ್ಪನ್ನ ಪ್ರಶ್ನಿಸಿ ಆರೋಪಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ. ಇಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುಷ್ಪಾ ಕೇವಲ ಪ್ಯಾಂಟ್ ಜಿಪ್ ಬಿಚಿದ್ರೆ ಅದನ್ನ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸೋಕೆ ಸಾಧ್ಯವಿಲ್ಲ ಎಂದು ತೀರ್ಪು ಪ್ರಕಟಿಸಿದ್ದರು.
ಇನ್ನೊಂದು ಪ್ರಕರಣದಲ್ಲಿ ಚರ್ಮಕ್ಕೆ ಚರ್ಮ ತಾಕಿಸದೆಯೇ ಅಪ್ರಾಪ್ತೆಯ ಸ್ತನಗಳನ್ನ ಆರೋಪಿ ಮುಟ್ಟಿದ್ರೆ ಅದು ಲೈಂಗಿಕ ಕಿರುಕುಳದ ವ್ಯಾಪ್ತಿಗೆ ಬರೋದಿಲ್ಲ ಅಂತಾನೂ ಇದೇ ನ್ಯಾಯಮೂರ್ತಿ ಪುಷ್ಪಾ ತೀರ್ಪನ್ನ ನೀಡಿದ್ದರು. ಸಾಕಷ್ಟು ವಿರೋಧದ ಬಳಿಕ ಈ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.