ಬ್ಯಾಂಕ್ ನಲ್ಲಿ ಜಂಟಿ ಖಾತೆ ತೆರೆಯಲು ಅವಕಾಶವಿದೆ. ಸ್ನೇಹಿತರು, ಸಂಗಾತಿಗಳು, ಕುಟುಂಬದ ಸದಸ್ಯರು, ವ್ಯಾಪಾರ ಪಾಲುದಾರರು ಹೇಗೆ ಯಾರು ಬೇಕಾದ್ರೂ ಜಂಟಿ ಖಾತೆ ತೆರೆಯಬಹುದು. ಜಂಟಿ ಖಾತೆ ತೆರೆಯುವ ಮೊದಲು ಅದ್ರ ಬಗ್ಗೆ ತಿಳಿದಿರುವುದು ಒಳ್ಳೆಯದು.
ಎರಡು ಅಥವಾ ಅದಕ್ಕಿಂತ ಹೆಚ್ಚಿನ ಜನರು ನಡೆಸುವ ಬ್ಯಾಂಕ್ ಖಾತೆಯನ್ನು ಜಂಟಿ ಖಾತೆ ಎನ್ನಲಾಗುತ್ತದೆ. ಪ್ರತಿ ಖಾತೆದಾರನಿಗೆ ಪ್ರತ್ಯೇಕವಾಗಿ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಖಾತೆದಾರ ಹಣವನ್ನು ವಿತ್ ಡ್ರಾ ಮಾಡಬಹುದು. ಉಳಿತಾಯ ಖಾತೆ ಸೌಲಭ್ಯ ನೀಡುವ ಭಾರತದ ಎಲ್ಲ ಬ್ಯಾಂಕ್ ಗಳು ಜಂಟಿ ಖಾತೆ ಸೌಲಭ್ಯವನ್ನೂ ನೀಡುತ್ತವೆ. ಜಂಟಿ ಖಾತೆಯಲ್ಲೂ ಡೆಬಿಟ್ ಕಾರ್ಡ್, ಚೆಕ್, ಅಡಮಾನ, ಸಾಲ ಸೇರಿದಂತೆ ಉಳಿತಾಯ ಖಾತೆಯ ಎಲ್ಲ ಸೌಲಭ್ಯ ಸಿಗುತ್ತದೆ.
‘ಆಧಾರ್’ ನಲ್ಲಿ ಫೋಟೋ ಬದಲಿಸುವ ಕುರಿತು ಇಲ್ಲಿದೆ ಮಾಹಿತಿ
ಜಂಟಿ ಖಾತೆ ಸಾಮಾನ್ಯ ಉಳಿತಾಯ ಖಾತೆಯಂತೆ ಇರುತ್ತದೆ. ಶಾಶ್ವತ ಅಥವಾ ತಾತ್ಕಾಲಿಕವಾಗಿರುತ್ತದೆ. ಇಬ್ಬರು ಜಂಟಿ ಖಾತೆ ತೆರೆದಿದ್ದು, ಅದ್ರಲ್ಲಿ ಒಬ್ಬರು ಸಾವನ್ನಪ್ಪಿದ್ರೆ ಇನ್ನೊಬ್ಬರು ಅದನ್ನು ಮುನ್ನಡೆಸಬಹುದು. ಮೊದಲ ಖಾತೆದಾರ ಮಾತ್ರ ಖಾತೆಯನ್ನು ನಿರ್ವಹಿಸಬೇಕಾಗುತ್ತದೆ. ಆತನ ನಿಧನದ ನಂತ್ರ ಎರಡನೇ ಖಾತೆದಾರನಿಗೆ ಹಕ್ಕು ಸಿಗುತ್ತದೆ. ಅಪ್ರಾಪ್ತರ ಹೆಸರಿನಲ್ಲಿ ಪಾಲಕರು ಜಂಟಿ ಖಾತೆ ತೆರೆಯಬಹುದು. ಅಪ್ರಾಪ್ತರ ಹೆಸರಿನಲ್ಲಿ ಪಾಲಕರು ಖಾತೆಯನ್ನು ನಿರ್ವಹಿಸಬೇಕಾಗುತ್ತದೆ.