ನಕಲಿ ಕೋವಿಡ್ 19 ಲಸಿಕೆಗಳನ್ನ ನೀಡುವ ಔಷಧಿ ಕೇಂದ್ರಗಳ ಮೇಲೆ ಈಕ್ವೇಡಾರ್ನಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಕ್ವಿಟೋದಲ್ಲಿರುವ ಆರೋಗ್ಯ ಚಿಕಿತ್ಸಾಲವು ಸಾವಿರಾರು ರೋಗಿಗಳಿಗೆ ನಕಲಿ ಲಸಿಕೆಗಳನ್ನ ನೀಡಿ ಸಿಕ್ಕಿಬಿದ್ದಿದೆ ಎಂದು ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಸೂಕ್ತ ಮಾಹಿತಿ ಆಧರಿಸಿದ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಜಂಟಿಯಾಗಿ ದಾಳಿ ನಡೆಸಿದ್ದರು.
ಇನ್ನು ಈ ವಿಚಾರವಾಗಿ ಮಾತನಾಡಿದ ಕ್ವಿಟೋ ಸೆಕ್ಯೂರಿಟಿ ಮುಖ್ಯಸ್ಥ ಸೆಸರ್ ಡಿಯಾಜ್, ನಕಲಿ ಕೊರೊನಾ ವೈರಸ್ ಪ್ರತಿ ಡೋಸ್ಗೆ 15 ಡಾಲರ್ ಶುಲ್ಕ ವಿಧಿಸಿ ಹಂಚಿಕೆ ಮಾಡಲಾಗ್ತಿದೆ. ಮೂರು ಡೋಸ್ಗಳ ಬಳಿಕ ಕೊರೊನಾ ನಿಮ್ಮ ಹತ್ತಿರವೂ ಸುಳಿಯಲ್ಲ ಎಂದು ಇವರು ಜನರನ್ನ ನಂಬಿಸಿದ್ದರು. ಈಗಾಗಲೇ ಇಲ್ಲಿ ನಕಲಿ ಲಸಿಕೆ ಪಡೆದ ಜನರನ್ನ ನಾವು ಸಂದರ್ಶಿಸಿದ್ದೇವೆ. ಈ ವೇಳೆ ಈವರಗೆ 70 ಸಾವಿರ ರೋಗಿಗಳಿಗೆ ನಕಲಿ ಡೋಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ ಅಂತಾ ಹೇಳಿದ್ರು.
ಅಲ್ಲದೇ ಈಗಾಗಲೇ ನೀಡಲಾಗಿರುವ ಈ ನಕಲಿ ಕೊರೊನಾ ಲಸಿಕೆಗಳಿಗೆ ಯಾವೆಲ್ಲ ರಾಸಾಯನಿಕಗಳನ್ನ ಬಳಕೆ ಮಾಡಲಾಗಿದೆ ಅನ್ನೋದ್ರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ರು.
ವರದಿಗಳ ಪ್ರಕಾರ ಕೊರೊನಾ ಸೋಂಕಿತರನ್ನ ಗುಣಪಡಿಸಲು ಇವರು ಲಸಿಕೆ ನೀಡಿಲ್ಲ. ಬದಕಾಗು ಜೀವಸತ್ವ ಹಾಗೂ ಸೀರಮ್ಗಳನ್ನ ನೀಡಿ ರೋಗ ಗುಣಪಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈವೆರೆಗೆ ಈ ನಕಲಿ ಲಸಿಕೆ ಮೂಲಕ 20 ಸಾವಿರ ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.