ಹೊಸ ವಾದ್ಯೋಪಕರಣ ನುಡಿಸುವುದನ್ನು ಅಭ್ಯಾಸ ಮಾಡುವುದು ಕೆಲವೊಮ್ಮೆ ನಮಗೂ, ಸುತ್ತಲಿನ ಮಂದಿಗೂ ಭಾರೀ ಕಿರಿಕಿರಿ ಉಂಟು ಮಾಡುವ ಅನುಭವವಾಗಬಹುದು. ಕೆಲವೊಮ್ಮೆ ಇದರಿಂದ ಆಗುವ ಕಿರಿಕಿರಿ ಜಗಳಕ್ಕೂ ಕಾರಣವಾಗಬಹುದು.
ಇಂಥದ್ದೇ ಒಂದು ನಿದರ್ಶನ ನ್ಯೂಯಾರ್ಕ್‌ನಲ್ಲಿ ಆಗಿದೆ. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಓಲಗ ನುಡಿಸುವುದನ್ನು ಕಲಿಯಲು ಮುಂದಾದ ವ್ಯಕ್ತಿಯೊಬ್ಬರು, ತಮ್ಮ ಈ ಅಭ್ಯಾಸದಿಂದ ಬಹಳಷ್ಟು ಸದ್ದು ಬರುವ ಕಾರಣ ತಮ್ಮ ನೆರೆಹೊರೆಯರಲ್ಲಿ ಮುಂಚಿತವಾಗಿಯೇ ಕ್ಷಮಾಪಣೆ ಕೋರಿದ್ದಾರೆ.
“ಓಲಗ ವಾದ್ಯ ನುಡಿಸುವ ಕಾರಣ ನಿಮ್ಮ ಬಳಿ ಕ್ಷಮೆ ಕೋರುತ್ತೇನೆ. ಕೆಲ ಕಾಲ ಇದು ಒರಟಾದ ಅನುಭವದಂತೆ ಇರುತ್ತದೆ,” ಎಂದು ಬರೆದು ತಮ್ಮ ಮನೆಯ ಬಾಗಿಲ ಮೇಲೆ ನೋಟಿಸ್‌ಗಳನ್ನು ಅಂಟಿಸಿದ್ದಾನೆ ಈ ಮನುಷ್ಯ.
ಈ ನೋಟ್‌ಗಳನ್ನು ಓದಿದ ನೆರೆಹೊರೆಯ ಮಂದಿ ಆತನ ಈ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿ, ಮುಂದುವರೆಯಲು ಸೂಚಿಸಿದ್ದಾರೆ.
ಈ ನೋಟಿಸ್‌ಗಳ ಚಿತ್ರವೊಂದನ್ನು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅದೀಗ ವೈರಲ್ ಆಗಿದೆ.