alex Certify ನಟಿ ಶ್ರುತಿ ಹಾಸನ್ ‘ಸೌಂದರ್ಯ’ ರಹಸ್ಯ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಶ್ರುತಿ ಹಾಸನ್ ‘ಸೌಂದರ್ಯ’ ರಹಸ್ಯ ಬಹಿರಂಗ

ಶ್ರುತಿ ಹಾಸನ್ ತೆಲುಗು ಹಾಗೂ ಹಿಂದಿ ಚಿತ್ರರಂಗದ ಖ್ಯಾತ ನಟಿ. ಇವರು ಇತ್ತೀಚೆಗೆ 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೂ ಇನ್ನು 20 ವರ್ಷದವರಂತೆ ಕಾಣುತ್ತಿದ್ದಾರೆ. ಹಾಗೇ ಅವರ ಸೌಂದರ್ಯ ಹಾಗೂ ಕೂದಲು ಬೇರೆಯವರ ಕಣ್ಣುಕುಕ್ಕಿಸುವಂತಿದೆ. ಅವರು ಇಂತಹ ಚರ್ಮ ಮತ್ತು ಕೂದಲಿನ ಸೌಂದರ್ಯ ಕಾಪಾಡಲು ಏನು ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

ಮುಖದ ಸೌಂದರ್ಯ ಕಾಪಾಡಲು ಅವರು ಈ ಎರಡು ಫೇಸ್ ಪ್ಯಾಕ್ ಗಳನ್ನು ಬಳಸುತ್ತಾರಂತೆ :

* 1 ಚಮಚ ಅಲೋವೆರಾ ಜೆಲ್ ಗೆ 2 ಚಮಚ ಹಾಲಿನ ಕೆನೆ, ಚಿಟಿಕೆ ಅರಿಶಿನ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡುತ್ತಾರಂತೆ.

ಹಾಗೇ 1 ಚಮಚ ಪಪ್ಪಾಯಿ ಪೇಸ್ಟ್ ಗೆ 1 ಚಮಚ ಜೇನುತುಪ್ಪ ಬೆರೆಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡುತ್ತಾರಂತೆ.

* ಕೂದಲಿನ ಸೌಂದರ್ಯ ಕಾಪಾಡಲು ಅವರು ಪ್ರತಿ ಬಾರಿ ಸ್ನಾನ ಮಾಡುವ ಮೊದಲು ತೆಂಗಿನೆಣ್ಣೆಯಿಂದ ಕೂದಲು, ನೆತ್ತಿಯನ್ನು ಮಸಾಜ್ ಮಾಡುತ್ತಾರಂತೆ. ಇದು ಕೂದಲನ್ನು ತೇವಾಂಶಗೊಳಿಸಿ ಹಾನಿಯಾಗುವುದನ್ನು ತಡೆಯುತ್ತದೆಯಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...