alex Certify ಬೈಯ್ಯಲು ಪ್ರಾಣಿಗಳ ಹೆಸರನ್ನು ಬಳಸಬೇಡಿ ಎಂದಿದೆ PETA | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಯ್ಯಲು ಪ್ರಾಣಿಗಳ ಹೆಸರನ್ನು ಬಳಸಬೇಡಿ ಎಂದಿದೆ PETA

ಇತ್ತೀಚೆಗೆ ’ಪೊಲಿಟಿಕಲಿ ಕರೆಕ್ಟ್‌’ ಆಗಿರಬೇಕೆಂಬ ಸಲಹೆಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಲೇ ಇರುತ್ತವೆ. ಪ್ರಾಣಿ ದಯಾ ಸಂಸ್ಥೆ ’ಪೇಟಾ’ ಸಹ ಈ ಕೆಲಸ ಮಾಡಲು ಮುಂದಾಗಿದ್ದು, ನೆಟ್ಟಿಗರಿಂದ ಸಾಕಷ್ಟು ಟ್ರೋಲ್‌ಗೆ ತುತ್ತಾಗಿದೆ.

ಯಾರನ್ನಾದರೂ ಅವಮಾನ ಮಾಡಲು ಪ್ರಾಣಿಗಳೊಂದಿಗೆ ಹೋಲಿಕೆ ಮಾಡುವ ಮೂಲಕ ಅಮಾಯಕ ಪ್ರಾಣಿಗಳಿಗೆ ಅವಮಾನ ಮಾಡುವುದು ಸರಿಯಲ್ಲ ಎಂಬ ವಾದ ಮುಂದಿಟ್ಟಿರುವ ಪೇಟಾ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಾನು ಹಾಕಿದ ಪೋಸ್ಟ್ ಒಂದಕ್ಕೆ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.

ಜನರನ್ನು ಅವಮಾನಿಸಲು, ’ಇಲಿ’, ’ಕತ್ತೆ’, ’ಹಂದಿ’ ಎಂಬೆಲ್ಲಾ ಪ್ರಾಣಿಗಳ ಹೆಸರುಗಳನ್ನು ಬಳಸುವುದು ಸರಿಯಲ್ಲ ಎಂದು ಪೇಟಾ ಹೇಳಿಕೊಂಡಿತ್ತು. ಆದರೆ ಪೇಟಾದ ಈ ಸಲಹೆ ಬೇಡವಾದ ಕಾರಣಕ್ಕೆಲ್ಲಾ ವೈರಲ್ ಆಗಿಬಿಟ್ಟಿದೆ.

ಕಾಲು ಮುರಿದ ಯಜಮಾನನ ಮೇಲಿನ ಪ್ರೀತಿಯನ್ನು ಈ ನಾಯಿ ವ್ಯಕ್ತಪಡಿಸಿದ್ದು ಹೇಗೆ ಗೊತ್ತಾ….?

“ಯಾರನ್ನಾದರೂ ಅವಮಾನ ಮಾಡಲು ಪ್ರಾಣಿಗಳಿಗೆ ಹೋಲಿಕೆ ಮಾಡುವ ಮೂಲಕ ಮಾನವರು ಸುಪೀರಿಯರ್‌ ಜೀವಿಗಳು ಎಂಬ ಮಿಥ್ಯೆಯನ್ನು ಇನ್ನಷ್ಟು ಬಲಪಡಿಸುತ್ತೇವೆ. ಈ ಮೂಲಕ ಪ್ರಾಣಿಗಳ ಮೇಲೆ ಹಿಂಸಾಚಾರಕ್ಕೆ ಇನ್ನಷ್ಟು ಕುಮ್ಮಕ್ಕು ಕೊಟ್ಟಂತಾಗುತ್ತದೆ. ಮೇಲಾಟದ ಭಾಷೆಯ ಬಳಕೆ ವಿರೋಧಿಸಲು ನಾವೆಲ್ಲಾ ಎದ್ದು ನಿಲ್ಲಬೇಕಿದೆ” ಎಂದು ಪೇಟಾ ತನ್ನ ಪೋಸ್ಟ್ ಮೂಲಕ ಹೇಳಿಕೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...