ಫೆಬ್ರವರಿ 1ರಿಂದ ಮುಂಬೈನಲ್ಲಿ ಸ್ಥಳೀಯ ರೈಲುಗಳ ಸೇವೆ ಆರಂಭವಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಘೋಷಿಸಿದ್ದಾರೆ. ಸೂಕ್ತ ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸಿಕೊಂಡು ಸ್ಥಳೀಯ ರೈಲು ಸೇವೆ ಆರಂಭಿಸಿಲಿದ್ದೇವೆ ಎಂದು ಅವರು ಹೇಳಿದ್ರು.
ಮುಂಬೈನ ಸ್ಥಳೀಯ ರೈಲುಗಳು ಇಲ್ಲಿನ ನಿವಾಸಿಗಳ ಪ್ರಯಾಣಕ್ಕೆ ಮೂಲಾಧಾರವಾಗಿದೆ ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಸೇವೆ ಸ್ಥಗಿತಗೊಂಡಿತ್ತು. ಈ ಹಿಂದೆ ಬಂದ ವರದಿಗಳ ಪ್ರಕಾರ ಮುಂಬೈನಲ್ಲಿ ಜನವರಿ 29 ಅಂದರೆ ಇಂದಿನಿಂದ ಸ್ಥಳೀಯ ರೈಲುಗಳ ಸೇವೆ ಆರಂಭವಾಗಲಿದೆ ಎಂದು ಹೇಳಲಾಗಿತ್ತು.
ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಮುಂಬೈ ನಗರದಲ್ಲಿ ಸ್ಥಳೀಯ ರೈಲುಗಳು ನಿಗದಿತ ಸಮಯದಲ್ಲಿ ಚಲಾಯಿಸಲಿವೆ. ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, ಬೆಳಗ್ಗೆ 7ಗಂಟೆಯವರೆಗೆ ಸಾರ್ವಜನಿಕರು ರೈಲಿನಲ್ಲಿ ಪ್ರಯಾಣ ಮಾಡಬಹುದು. ಇದಾದ ಬಳಿಕ ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ರೈಲ್ವೆ ಸೇವೆ ಸಾರ್ವಜನಿಕರಿಗೆ ಸಿಗಲಿದೆ.
ರಾತ್ರಿ 9 ಗಂಟೆಗೆ ರೈಲು ಸೇವೆ ಅಂತ್ಯವಾಗಲಿದೆ. ಉಳಿದ ಅವಧಿಗಳಲ್ಲಿ ತುರ್ತು ಸೇವಾ ಸಿಬ್ಬಂದಿಗೆ ಮಾತ್ರ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.