ಬೆಂಗಳೂರು: ಪ್ರಜಾಪ್ರಭುತ್ವದ ದೇಗುಲದಲ್ಲಿ ಕುಳಿತು ಮತ್ತೋರ್ವ ಶಾಸಕ ನೀಲಿ ಚಿತ್ರ ವೀಕ್ಷಿಸುವ ಮೂಲಕ ಸದನದ ಮಾನ ಮರ್ಯಾದೆ ಕಳೆದ ಘಟನೆ ವಿಧಾನ ಪರಿಷತ್ ನಲ್ಲಿ ನಡೆದಿದೆ.
ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ಇಂದು ಪರಿಷತ್ ಕಲಾಪದ ವೇಳೆ ಎಂ.ಎಲ್.ಸಿ. ಪ್ರಕಾಶ್ ರಾಥೋಡ್ ನೀಲಿ ಚಿತ್ರ ವೀಕ್ಷಣೆಯಲ್ಲಿ ತಲ್ಲೀನರಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಶ್ನೋತ್ತರ ಕಲಾಪದ ವೇಳೆ ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕಿದ್ದ ಪರಿಷತ್ ಸದಸ್ಯರೊಬ್ಬರು ಈ ರೀತಿ ಮೊಬೈಲ್ ನಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸುವುದರಲ್ಲೇ ಮಗ್ನರಾದ್ದು, ಸದನದ ಗೌರವಕ್ಕೆ ಧಕ್ಕೆಯುಂಟು ಮಾಡಿದ್ದಾರೆ ಎನ್ನಲಾಗುತ್ತಿದೆ. ಕಲಾಪದಲ್ಲಿ ಜನಪ್ರತಿನಿಧಿಯೊಬ್ಬರ ಈ ನಡೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಪ್ರಕಾಶ್ ರಾಥೋಡ್, ತಾವು ಮೆಸೇಜ್ ಡಿಲಿಟ್ ಮಾಡುತ್ತಿದ್ದು, ಯಾವುದೇ ವಿಡಿಯೋ ನೋಡಿಲ್ಲ ಎಂದಿದ್ದಾರೆ.