alex Certify ಬಿಡುಗಡೆಯಾದ ಕೆಲ ದಿನಗಳಲ್ಲೇ FAU-G ಆಪ್‌ ಭರ್ಜರಿ ಸಾಧನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಯಾದ ಕೆಲ ದಿನಗಳಲ್ಲೇ FAU-G ಆಪ್‌ ಭರ್ಜರಿ ಸಾಧನೆ

ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾದ ಫೌಜಿ ಗೇಮಿಂಗ್​ ಅಪ್ಲಿಕೇಶನ್​ ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಧೂಳೆಬ್ಬಿಸಿದೆ. ಇತ್ತೀಚಿನ ಮಾಹಿತಿ ಪ್ರಕಾರ ಫೌಜಿ ಗೇಮ್​ ಪ್ಲೇ ಸ್ಟೋರ್​ನಲ್ಲಿ 5 ಮಿಲಿಯನ್​​ನಷ್ಟು ಜನರು ಡೌನ್​ಲೋಡ್​ ಮಾಡಿದ್ದಾರೆ. ಈ ಮೂಲಕ ಗೂಗಲ್​ ಪ್ಲೇಸ್ಟೋರ್​ನ ಟಾಪ್​ ಗೇಮಿಂಗ್​ ಅಪ್ಲಿಕೇಶನ್​ಗಳಲ್ಲಿ ಫೌಜಿ ಸ್ಥಾನ ಪಡೆದಿದೆ.

ʼವಾಟ್ಸಾಪ್ʼ‌ ನಿಂದ ಟೆಲಿಗ್ರಾಂಗೆ ಶಿಫ್ಟ್ ಆಗಲು ಇಲ್ಲಿದೆ ಸುಲಭ ವಿಧಾನ

ಐಒಎಸ್​​ ಡಿವೈಸ್​ಗಳಿಗೆ ಫೌಜಿ ಅಪ್ಲಿಕೇಶನ್​ನ್ನು ಅಭಿವೃದ್ಧಿಪಡಿಸಲಾಗಿಲ್ಲ. ಆದರೆ ಶೀಘ್ರದಲ್ಲೇ ಅಪ್ಲಿಕೇಶನ್​ ಅಪ್​ಡೇಟ್​ ನೀಡೋದಾಗಿ ಕಂಪನಿ ಹೇಳಿದೆ. ಟ್ವಿಟರ್​ ಮಾಹಿತಿ ಹಂಚಿಕೊಂಡ ಫೌಜಿ ನಿಮಾತೃ ಕಂಪನಿಯಾದ ಎನ್​ಕೋರ್​, ಫೌಜಿ ಗೂಗಲ್​ ಪ್ಲೇನಲ್ಲಿ ಟಾಪ್​ ಫ್ರೀ ಗೇಮಿಂಗ್​ ಅಪ್ಲಿಕೇಶನ್​ ಆಗಿದೆ ಎಂದು ಹೇಳಿದ್ದಾರೆ. ಪಬ್​ಜಿ ಯಂತೆಯೇ ಇರುವ ಗೇಮ್​ ಇದಾಗಿದ್ದು, ಇದರಲ್ಲಿ ಭಾರತೀಯ ಸೈನಿಕರು ಗಲ್ವಾನ್​ ಕಣಿವೆಯಲ್ಲಿ ಚೀನಾದ ಸೈನಿಕರ ವಿರುದ್ಧ ಸೆಣೆಸುತ್ತಿರುವ ರೀತಿಯಲ್ಲಿ ಗೇಮ್​ನ್ನು ಅಭಿವೃದ್ಧಿ ಪಡಿಸಲಾಗಿದೆ.

ಫೌಜಿ ಗೇಮಿಂಗ್​ ಅಪ್ಲಿಕೇಶನ್​ನಲ್ಲಿ ಪಾಲುದಾರಿಕೆ ಹೊಂದಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಈ ಅಪ್ಲಿಕೇಶನ್​ ಪ್ರಾಯೋಜಿಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಅಲ್ಲದೇ ಈ ಗೇಮ್​ನಿಂದ ಸಂಪಾದನೆಯಾದ ಹಣದಲ್ಲಿ 20 ಪ್ರತಿಶತ ಭಾರತ್​ ಕಿ ವೀರ್​ ಟ್ರಸ್ಟ್​ಗೆ ನೀಡಲಾಗುತ್ತೆ ಎಂದು ಕಂಪನಿ ಹೇಳಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...