ಮುಂಬೈ: ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಸರ್ಕಾರ ಇದೀಗ 50 ವರ್ಷಗಳ ಹಿಂದಿನ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದೆ.
ಎ ಕೇಸ್ ಫಾರ್ ಜಸ್ಟೀಸ್ ಎಂಬ ಹೆಸರಿನ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿರುವ ಮಹಾ ಸರ್ಕಾರ ಈ ಮೂಲಕ ಬೆಳಗಾವಿ, ಕಾರವಾರ, ಬೀದರ್ ಭಾಗಗಳು ಮರಾಠಿ ಭಾಷಿಕರದ್ದಾಗಿದ್ದು, ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದನ್ನು ಸಾಬೀತು ಮಾಡುವ ದುಸ್ಸಾಹಸಕ್ಕೆ ಹೊರಟಿದೆ.
ಟ್ವಿಟರ್ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಬೆಲೆತೆತ್ತ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ
ಮಹಾರಾಷ್ಟ್ರ ಸರ್ಕಾರವೇ ತಯಾರಿಸಿರುವ ಈ ಸಾಕ್ಷ್ಯಚಿತ್ರದಲ್ಲಿ ಕಾರವಾರದ ಗ್ರಾಮವೊಂದರಲ್ಲಿ ಇಂಗ್ಲೀಷ್, ಕೊಂಕಣಿ, ಮರಾಠಿ ಭಾಷೆಯ ಬೋಧನೆ ಚಿತ್ರಣ, ಎನ್ ಸಿಸಿ ಬಟಾಲಿಯನ್ ನಲ್ಲಿ ಮರಾಠಿ ಬೋರ್ಡ್, ಮರಾಠಿ ಪತ್ರಿಕೆಯಲ್ಲಿ 1912ರಲ್ಲಿ ಕಾರವಾರ ಸಹಕಾರಿ ಬ್ಯಾಂಕ್ ನ ಸುದ್ದಿ ಪ್ರಸಾರ, ಬೆಳಗಾವಿಯಲ್ಲಿ 1890 ರಲ್ಲಿ ನಿರ್ಮಾಣವಾದ ಸೇತುವೆ ಮೇಲೆ ಮರಾಠಿ ನಾಮಫಲಕ ಇರುವ ದೃಶ್ಯ ಸೇರಿದಂತೆ ಹಲವು ಅಂಶಗಳು ಸಾಕ್ಷ್ಯಚಿತ್ರದಲ್ಲಿದೆ.