ಡೆಸ್ಕ್‌ಟಾಪ್ ನಲ್ಲಿ ವಾಟ್ಸಾಪ್ ವೆಬ್ ಬಳಕೆದಾರರಿಗೆ ಇಲ್ಲಿದೆ ಶುಭ ಸುದ್ದಿ ಇದೆ. ವಾಟ್ಸಾಪ್ ಡೆಸ್ಕ್‌ಟಾಪ್ ಆ್ಯಪನ್ನು ಅಪ್ ಡೇಟ್ ಮಾಡಿರುವ ಕಂಪನಿ ಮತ್ತಷ್ಟು ಸುರಕ್ಷತಾ ನಿಯಮಗಳನ್ನು ಅಳವಡಿಸಿದೆ.
ಡೆಸ್ಕ್‌ಟಾಪ್ ನಲ್ಲಿ ವಾಟ್ಸಾಪ್ ಬಳಕೆ ಮಾಡಬೇಕು ಎಂದರೆ ಇನ್ನು ಫಿಂಗರ್ ಪ್ರಿಂಟ್ ಅಥವಾ ಫೇಸ್ ಐಡಿ ಗುರುತು ತೋರಿಸಿ ಲಾಗಿನ್ ಆಗಬೇಕಿದೆ. ಈ ಫೀಚರ್ ಒಂದು ಲೇಯರ್ ಹೆಚ್ಚುವರಿ ಸುರಕ್ಷತೆ ನೀಡಲಿದೆ ಎಂದು ಕಂಪನಿ ಹೇಳಿದೆ.
ಡೆಸ್ಕ್‌ಟಾಪ್ ನಲ್ಲಿ ವಾಟ್ಸಾಪ್ ವೆಬ್ ಮೂಲಕ ನಮ್ಮ ಅಕೌಂಟ್ ನಲ್ಲಿ ಬೇರೆಯವರು ಲಾಗಿನ್ ಆಗುವ ಸಾಧ್ಯತೆಯನ್ನು ಇದು ಕಡಿಮೆ ಮಾಡಲಿದೆ. ಇದುವರೆಗೆ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವೆಬ್ ಗೆ ಎಂಟ್ರಿ ಆಗಬಹುದಿತ್ತು. ಇದರಿಂದ ಮನೆಯವರು ಅಥವಾ ಕಚೇರಿಯ ಇತರರು ಡಿವೈಸ್ ಗೆ ಪ್ರವೇಶ ಮಾಡಬಹುದಿತ್ತು.