alex Certify ಟ್ವಿಟರ್​ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಬೆಲೆತೆತ್ತ ಪತ್ರಕರ್ತ ರಾಜ್​ದೀಪ್​​ ಸರ್​ದೇಸಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಬೆಲೆತೆತ್ತ ಪತ್ರಕರ್ತ ರಾಜ್​ದೀಪ್​​ ಸರ್​ದೇಸಾಯಿ

ಇಂಡಿಯಾ ಟುಡೇ ಗ್ರೂಪ್​ ಮಂಗಳವಾರ ಹಿರಿಯ ಪತ್ರಕರ್ತ ಹಾಗೂ ನಿರೂಪಕ ರಾಜ್​ದೀಪ್​ ಸರ್​ದೇಸಾಯಿ ಅವರನ್ನ ಎರಡು ವಾರಗಳ ಕಾಲ ಆಫ್​ ಏರ್​ ಮಾಡಿರೋದು ಮಾತ್ರವಲ್ಲದೇ ಸಂಬಳ ಕೂಡ ಕಟ್​ ಮಾಡೋದಾಗಿ ಹೇಳಿದೆ. ರೈತರ ಪ್ರತಿಭಟನೆ ವಿಚಾರದಲ್ಲಿ ಟ್ವಿಟರ್​ನಲ್ಲಿ ಸುಳ್ಳು ಸುದ್ದಿ ಬಿತ್ತರಿಸಿದ್ದ ರಾಜ್​ದೀಪ್​ ವಿರುದ್ಧ ಭಾರೀ ಆಕ್ರೋಶ ಉಂಟಾಗಿತ್ತು.

ಹೋರಾಟ ನಿರತ ರೈತರನ್ನು ತೆರವುಗೊಳಿಸಲು ಮುಂದಾದ ಪೊಲೀಸರಿಗೆ ಬಿಗ್ ಶಾಕ್: ಮತ್ತೆ ಹರಿದುಬಂದ ಅನ್ನದಾತರು

ಇಂಡಿಯಾ ಟುಡೆ ಮಾಧ್ಯಮದ ಕನ್ಸಲ್ಟಿಂಗ್​ ಸಂಪಾದಕರಾಗಿರುವ ರಾಜ್​ದೀಪ್​, ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್​ ರ್ಯಾಲಿ ವೇಳೆ ಪೊಲೀಸರ ಗುಂಡೇಟಿಗೆ ರೈತ ಬಲಿಯಾಗಿದ್ದಾನೆ ಎಂದು ತ್ರಿವರ್ಣ ಧ್ವಜ ಹೊದಿಸಲಾಗಿದ್ದ ಮೃತದೇಹದ ಫೋಟೋವೊಂದನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದರು. ಬಳಿಕ ರೈತ ಟ್ರ್ಯಾಕ್ಟರ್​ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿಯುತ್ತಿದ್ದಂತೆಯೇ ಟ್ವೀಟ್​ ಡಿಲೀಟ್​ ಮಾಡಿದ್ದರು.

ಇಂತಹ ಒಂದು ಸೂಕ್ಷ್ಮ ವಿಚಾರದಲ್ಲಿ ಪತ್ರಕರ್ತ ಧರ್ಮವನ್ನ ಪಾಲಿಸದ ರಾಜ್​ದೀಪ್​ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಇಂಡಿಯಾ ಟುಡೆ ಗ್ರೂಪ್​ ಹೇಳಿಕೆ ನೀಡಿದೆ. ಆದರೆ ಈ ಸಂಬಂಧ ರಾಜ್​ದೀಪ್​ ಈವರೆಗೆ ಯಾವುದೇ ಕಾಮೆಂಟ್​ ಮಾಡಿಲ್ಲ.

https://twitter.com/i/status/1354333687572271105

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...