ನವದೆಹಲಿ: ದೆಹಲಿಯ ಘಾಜಿಪುರ್ ಗಡಿಯಲ್ಲಿ ರೈತರನ್ನು ತೆರವುಗೊಳಿಸಲು ಮುಂದಾದ ಪೊಲೀಸರ ಲೆಕ್ಕಾಚಾರ ತಲೆಕೆಳಗಾಗಿದೆ.
ಉತ್ತರಪ್ರದೇಶ ಸರ್ಕಾರ ಘಾಜಿಪುರ ಗಡಿಯಲ್ಲಿ ಹೋರಾಟ ನಿರತ ರೈತರನ್ನು ತೆರವುಗೊಳಿಸಲು ಪ್ಲಾನ್ ಮಾಡಿಕೊಂಡಿತ್ತು. ಆದರೆ, ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಉಪವಾಸ ಸತ್ಯಾಗ್ರಹ ಆರಂಭಿಸಿ ಕಣ್ಣೀರಿಟ್ಟಿದ್ದಾರೆ. ಅವರಿಗೆ ಶರಣಾಗುವಂತೆ ಪೊಲೀಸರು ಸೂಚಿಸಿದ್ದು, ಇದನ್ನು ನಿರಾಕರಿಸಿದ ಅವರು ಹೋರಾಟ ಮುಂದುವರೆಸಿದ್ದಾರೆ.
ರೈತ ನಾಯಕನ ಕಣ್ಣೀರಿಗೆ ಕರಗಿದ ರೈತ ಸಮುದಾಯವೇ ಅವರ ಬೆಂಬಲಕ್ಕೆ ಹರಿದುಬಂದಿದೆ. ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡ ರೈತರು ಟಿಕಾಯತ್ ಹೋರಾಟಕ್ಕೆ ಕೈಜೋಡಿಸಿದ್ದು ಸ್ಥಳದಿಂದ ಕದಲದೇ ಇರಲು ನಿರ್ಧರಿಸಿದ್ದಾರೆ. ಸ್ಥಳದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ ಎಂದು ಹೇಳಲಾಗಿದೆ.