ಬೆಂಗಳೂರು: ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜೂನ್ 14 ರಿಂದ 25 ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಜೂನ್ 14 ರಂದು ಪ್ರಥಮ ಭಾಷೆ,
ಜೂನ್ 16 ಗಣಿತ(ರೆಗ್ಯುಲರ್ ಅಲ್ಲದವರಿಗೆ ಸಮಾಜಶಾಸ್ತ್ರ)
ಜೂನ್ 18 ದ್ವಿತೀಯ ಭಾಷೆ ಇಂಗ್ಲಿಷ್ ಅಥವಾ ಕನ್ನಡ
ಜೂನ್ 19 ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಇತ್ಯಾದಿ
ಜೂನ್ 21 ವಿಜ್ಞಾನ
ಜೂನ್ 23 ತೃತೀಯ ಭಾಷೆ
ಜೂನ್ 25 ಸಮಾಜ-ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.
ಪ್ರಥಮ ಭಾಷೆ ಹಾಗೂ ಕೋರ್ ವಿಷಯ ಪರೀಕ್ಷೆಗಳಿಗೆ 3.15 ಗಂಟೆ ದ್ವಿತೀಯ ಮತ್ತು ತೃತೀಯ ಭಾಷೆಗಳಿಗೆ ಮೂರು ಗಂಟೆ ಸಮಯ ನೀಡಲಾಗುವುದು. ಎಲ್ಲಾ ವಿಷಯಗಳಿಗೆ ಮೊದಲ 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಮೀಸಲಿರುತ್ತದೆ ಎಂದು ಹೇಳಲಾಗಿದೆ.