ಬೆಂಗಳೂರು: ತೆಲುಗು ಚಿತ್ರರಂಗದ ಹೊಸ ನಿರ್ಧಾರದ ವಿರುದ್ಧ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ ಆಗಿದ್ದಾರೆ. ತೆಲುಗು ಸಿನಿಮಾದ ಹೊಸ ನೀತಿ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ. ಇಂದು ಫಿಲಂ ಚೇಂಬರ್ ಗೆ ದರ್ಶನ್ ದೂರು ನೀಡಲಿದ್ದಾರೆ.
ಕನ್ನಡ ಚಿತ್ರಗಳ ಬಿಡುಗಡೆಗೆ ಟಾಲಿವುಡ್ ನಲ್ಲಿ ಅಡ್ಡಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ತೆಲುಗು ಚಿತ್ರರಂಗದ ಹೊಸ ನೀತಿಯಿಂದ ಕನ್ನಡ ಸಿನಿಮಾಗಳಿಗೆ ಸಂಕಷ್ಟ ಎದುರಾಗಲಿದೆ. ಹಾಗಾಗಿ, ದರ್ಶನ್ ಟಾಲಿವುಡ್ ವಿರುದ್ಧ ಇಂದು ದೂರು ನೀಡಲಿದ್ದಾರೆ.
ಅಂದ ಹಾಗೆ ತೆಲುಗಿನ ಯಾವುದಾದರೂ ಸಿನಿಮಾ ರಿಲೀಸ್ ಆದರೆ ಅದೇ ದಿನ ತೆಲುಗಿಗೆ ಡಬ್ ಆದ ಸಿನಿಮಾ ಬಿಡುಗಡೆ ಆಗಬಾರದಂತೆ. ಪ್ರತಿವಾರ ಒಂದಲ್ಲ ಒಂದು ತೆಲುಗು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕನ್ನಡ ಭಾಷೆಯ ಅನೇಕ ಚಿತ್ರಗಳು ತೆಲುಗಿಗೆ ಡಬ್ ಆಗಿ ಬಿಡುಗಡೆಗೆ ಕಾಯುತ್ತಿವೆ.
ದರ್ಶನ್ ಅಭಿನಯ ‘ರಾಬರ್ಟ್’ ಕೂಡ ಮಾರ್ಚ್ 11 ರಂದು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಅದೇ ದಿನ ತೆಲುಗಿನ ಎರಡು ಸಿನಿಮಾಗಳು ಬಿಡುಗಡೆಯಾಗಲಿವೆ. ತೆಲುಗು ಚಿತ್ರರಂಗದ ಹೊಸ ನೀತಿಯಿಂದ ಕನ್ನಡ ಚಿತ್ರಗಳಿಗೆ ಸಮಸ್ಯೆಯಾಗಲಿದೆ. ತೆಲುಗು ಸಿನಿಮಾಗಳನ್ನು ರಾಜ್ಯದಲ್ಲಿ ಯಾವಾಗ ಬೇಕಾದರೂ ಬಿಡುಗಡೆ ಮಾಡಬಹುದು. ಅಲ್ಲಿ ನಮ್ಮ ಸಿನಿಮಾಗಳು ಬೇಡವೆಂದರೆ ಹೇಗೆ? ಇಲ್ಲಿ ಮಾತ್ರ ಅವರ ಸಿನಿಮಾಗಳು ಏಕೆ ಬೇಕು ಎಂದು ಪ್ರಶ್ನಿಸಿರುವ ದರ್ಶನ್ ಫಿಲ್ಮ್ ಚೇಂಬರ್ ಗೆ ಇಂದು ದೂರು ನೀಡಲಿದ್ದಾರೆ ಎಂದು ಹೇಳಲಾಗಿದೆ.