alex Certify ಫೆಬ್ರವರಿಯಲ್ಲಿ ಇವಿಷ್ಟು ದಿನ ಸಿಗೋದಿಲ್ಲ ಬ್ಯಾಂಕುಗಳ​ ಸೇವೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆಬ್ರವರಿಯಲ್ಲಿ ಇವಿಷ್ಟು ದಿನ ಸಿಗೋದಿಲ್ಲ ಬ್ಯಾಂಕುಗಳ​ ಸೇವೆ..!

ಮೊದಲೆಲ್ಲ ಬ್ಯಾಂಕ್​ಗಳಿಗೆ ರಜೆ ಅಂದರೆ ತಲೆ ಕೆಟ್ಟು ಹೋಗ್ತಿತ್ತು. ಆದರೆ ಈಗ ಹಾಗಲ್ಲ ನೆಟ್​ ಬ್ಯಾಂಕಿಂಗ್​ ಮೂಲಕ ಅವಶ್ಯಕ ವ್ಯವಹಾರಗಳನ್ನ ನಾವೇ ನಡೆಸಬಹುದಾಗಿದೆ. ಹಾಗಂತ ನಾವು ಬ್ಯಾಂಕ್​ಗಳನ್ನೂ ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ. ಲಾಕರ್​ ವ್ಯವಸ್ಥೆ, ಸಾಲದ ಬಗ್ಗೆ ಮಾಹಿತಿ ಹೀಗೆ ಮುಖ್ಯ ಕೆಲಸ ಆಗಬೇಕು ಅಂದರೆ ನಾವು ಬ್ಯಾಂಕ್​ಗೆ ತೆರಳಲೇಬೇಕು.

ಆರ್​ಬಿಐ ಫೆಬ್ರವರಿ ತಿಂಗಳಲ್ಲಿ ಯಾವ ದಿನಗಳಂದು ಯಾವ ಪ್ರದೇಶದ ಬ್ಯಾಂಕ್​ಗಳು ಬಂದ್​ ಇರಲಿವೆ ಅನ್ನೋದ್ರ ಬಗ್ಗೆ ಪಟ್ಟಿ ಬಿಡುಗಡೆ ಮಾಡಿದೆ. ಇದರನ್ವಯ ಫೆಬ್ರವರಿ 12ರಂದು ಗ್ಯಾಂಗ್ಟೋಕ್​​ನಲ್ಲಿ ಸೋನಮ್​ ಲೋಚಾರ್​ ಹಿನ್ನೆಲೆ ರಜೆ ಇರಲಿದೆ. ಬೇಲಾಪುರ, ಮುಂಬೈ ಹಾಗೂ ನಾಗ್ಪುರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್​ ಜಯಂತಿ ಪ್ರಯುಕ್ತ ಬ್ಯಾಂಕ್​ಗಳು ಬಂದ್​ ಇರಲಿದೆ. ಮುಂದಿನ ತಿಂಗಳು ಬ್ಯಾಂಕ್​ಗಳಿಗೆ 8 ದಿನಗಳ ಕಾಲ ಕ್ಲೋಸ್ ಇರಲಿದ್ದು ಇದರಲ್ಲಿ 6 ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಆಗಿರಲಿದೆ.

ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್​ಗಳ ರಜೆ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ

ಫೆಬ್ರವರಿ 7 : ಭಾನುವಾರ

ಫೆಬ್ರವರಿ 13 :ಎರಡನೇ ಶನಿವಾರ

ಫೆಬ್ರವರಿ 14: ಭಾನುವಾರ

ಫೆಬ್ರವರಿ 21: ಭಾನುವಾರ

ಫೆಬ್ರವರಿ 27: 4ನೇ ಶನಿವಾರ

ಫೆಬ್ರವರಿ 28 : ಭಾನುವಾರ

ಆದರೆ ಈ ರಜಾ ದಿನವೂ ನೆಟ್​ ಬ್ಯಾಂಕಿಂಗ್​ ಕಾರ್ಯದಲ್ಲೇ ಇರಲಿದೆ. ಹೀಗಾಗಿ ನೀವು ನೆಟ್​ ಬ್ಯಾಂಕಿಂಗ್​ ಮೂಲಕ ಅಗತ್ಯ ಬ್ಯಾಂಕಿಂಗ್​ ವ್ಯವಹಾರ ನಡೆಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...