ಐದನೇ ತರಗತಿ ಓದುತ್ತಿರುವ 11 ವರ್ಷದ ವಿದ್ಯಾರ್ಥಿ ಮಾಡಿದ ಕೆಲಸ ಕೇಳಿದ್ರೆ ದಂಗಾಗ್ತಿರಾ.
11 ವರ್ಷದ ಬಾಲಕ ಯುಟ್ಯೂಬ್ ನಲ್ಲಿ ಇಮೇಲ್ ಹ್ಯಾಕ್ ಮಾಡಿ ತಂದೆಗೆ ಧಮಕಿ ಹಾಕಿ 10 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದಾನೆ.
ಮನೆಯಲ್ಲಿರುವ ಮಗನೇ ಈ ಕೆಲಸ ಮಾಡಿದ್ದಾನೆ ಎಂಬ ವಿಷ್ಯ ಗೊತ್ತಾಗ್ತಿದ್ದಂತೆ ತಂದೆ ಮಾತ್ರ ಅಲ್ಲ ಪೊಲೀಸರೂ ದಂಗಾಗಿದ್ದಾರೆ.
ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ತನ್ನ ಇಮೇಲ್ ಹ್ಯಾಕ್ ಆಗಿದೆ. 10 ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಇಲ್ಲವಾದಲ್ಲಿ ಖಾಸಗಿ ವಿಷ್ಯ ಬಹಿರಂಗ ಮಾಡುವುದಾಗಿ ಬೆದರಿಸಿದ್ದಾರೆಂದು ದೂರು ನೀಡಿದ್ದರು. ಪ್ರತಿ ದಿನದ ಇಮೇಲ್ ಮೇಲೆ ಹ್ಯಾಕರ್ ಕಣ್ಣಿಟ್ಟಿದ್ದಾರೆ. ಹತ್ಯೆ ಮಾಡುವುದಾಗಿ ಬೆದರಿಸಿದ್ದಾರೆಂದು ದೂರಿನಲ್ಲಿ ಹೇಳಿದ್ದರು.
SPECIAL NEWS: ಹೆಚ್ಚೆಚ್ಚು ಲೈಕ್ಸ್ ಸಿಕ್ಕಷ್ಟು ಹೆಚ್ಚಾಗುತ್ತೆ ವೃದ್ದ ಜೀವಗಳ ಜೀವನೋತ್ಸಾಹ
ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದರು. ಐಪಿ ಅಡ್ರೆಸ್ ಚೆಕ್ ಮಾಡಿದಾಗ ಪೊಲೀಸರು ಅಚ್ಚರಿಗೊಂಡಿದ್ದಾರೆ. ಧಮಕಿ ಇಮೇಲ್ ಬರ್ತಿರುವುದು ವ್ಯಕ್ತಿ ಮನೆಯಿಂದಲೇ ಎಂಬುದು ಗೊತ್ತಾಗಿದೆ. ವಿಚಾರಣೆ ನಡೆಸಿದಾಗ 11 ವರ್ಷದ ಬಾಲಕ ಈ ಕೆಲಸ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆತನಿಗೆ ಆನ್ಲೈನ್ ಕ್ಲಾಸ್ ನಲ್ಲಿ ಹ್ಯಾಕರ್ ಬಗ್ಗೆ ಮಾಹಿತಿ ನೀಡಲಾಗಿತ್ತು. ಇದನ್ನು ಕೇಳಿದ ಬಾಲಕ ಆನ್ಲೈನ್ ನಲ್ಲಿ ಹ್ಯಾಕರ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾನೆ. ಹ್ಯಾಕ್ ಮಾಡುವುದನ್ನು ಕಲಿತು ತಂದೆ ಇಮೇಲ್ ಹ್ಯಾಕ್ ಮಾಡಿದ್ದಾನೆ.