ಬರೋಬ್ಬರಿ 52 ವರ್ಷಗಳ ಬಳಿಕ ಫೆಬ್ರವರಿ 1ರಿಂದ ನಡೆಯಲಿರುವ ಪಾರ್ಲಿಮೆಂಟ್ ಬಜೆಟ್ ಅಧಿವೇಶನದಲ್ಲಿ ಐಟಿಡಿಸಿ ಸಂಸದರಿಗೆ ಫೈವ್ ಸ್ಟಾರ್ ಹೋಟೆಲ್ ಅಶೋಕದಿಂದ ತಯಾರಿಸಲಾದ ಆಹಾರವನ್ನ ನೀಡಲಾಗುತ್ತೆ.
ಈ ಮೂಲಕ 52 ವರ್ಷಗಳ ಉತ್ತರ ರೈಲ್ವೆ ಸ್ವಾಧೀನದಲ್ಲಿದ್ದ ಕ್ಯಾಂಟೀನ್ ಸೇವೆ ಐಟಿಡಿಸಿ ಪಾಲಾಗಲಿದೆ.
ಆದರೆ ಅಧಿವೇಶನದಲ್ಲಿ ಭಾಗಿಯಾಗುವ ಸಂಸದರು ಅಶೋಕ ಹೋಟೆಲ್ನಲ್ಲಿ ಪಾವತಿ ಮಾಡಿದ ಬಿಲ್ನ್ನ ಇಲ್ಲಿ ನೀಡಬೇಕಾಗಿಲ್ಲ. ಉದಾಹರಣೆಗೆ ಪಾರ್ಲಿಮೆಂಟ್ ಕ್ಯಾಂಟೀನ್ನಲ್ಲಿ ಸಸ್ಯಹಾರಿ ಅಡುಗೆಗಳು ಅಗ್ಗದ ದರಕ್ಕೆ ಸಿಗಲಿದೆ. ಕಡಾಯಿ ಪನ್ನೀರ್, ಮಿಕ್ಸ್ ವೆಜ್ ಡ್ರೈ, ಭಾಜಿ. ದಾಲ್ ಸುಲ್ತಾನಿ, ಬಟಾಣಿ ಪಲಾವ್. ಚಪಾತಿ, ರಾಯತಾ, ಹಪ್ಪಳ ಹಾಗೂ ಜಾಮೂನ್ನ ಬೆಲೆ ಕೇವಲ 100 ರೂಪಾಯಿ ಇರಲಿದೆ.
ಇನ್ನು ಮಿನಿ ಊಟಕ್ಕೆ ಕೇವಲ 50 ರೂಪಾಯಿ ಪಾವತಿ ಮಾಡಿದರೆ ಸಾಕು. ಇದರಲ್ಲಿ ಮಿಕ್ಸ್ ವೆಜ್ ಡ್ರೈ, ಭಾಜಿ, ದಾಲ್ ಸುಲ್ತಾನಿ, ಜೀರಾ ಪಲಾವ್, ಚಪಾತಿ, ಗ್ರೀನ್ ಸಲಾಡ್, ಸೌತೆಕಾಯಿ ಪುದೀನಾ ರಾಯತಾ ಹಾಗೂ ಹಪ್ಪಳ ಇರಲಿದೆ.
13 ಐಟಮ್ಗಳ ಮೆನುವಿನಲ್ಲಿ ಸ್ನ್ಯಾಕ್ಸ್ ಹಾಗೂ 7 ಬಗೆಯ ಊಟದ ಆಯ್ಕೆ ಇದೆ. ಉಪಹಾರ ವಿಭಾಗದಲ್ಲಿ 25 ರೂಪಾಯಿಗೆ ಉಪ್ಪಿಟ್ಟು, 50 ರೂಪಾಯಿಗೆ ಪನ್ನೀರ್ ಪಕೋಡಾ, 10 ರೂಪಾಯಿಗೆ ಸಮೋಸಾ ಹಾಗೂ ಕಚೋರಿ ಸೇರಿದಂತೆ ಇನ್ನೂ ಹಲವು ತಿನಿಸುಗಳು ಸಿಗಲಿದೆ.