alex Certify ಕಾಲೇಜು ಶುಲ್ಕ ಭರಿಸಲು ಕೂಲಿ ಕೆಲಸಕ್ಕೆ ಸೇರಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲೇಜು ಶುಲ್ಕ ಭರಿಸಲು ಕೂಲಿ ಕೆಲಸಕ್ಕೆ ಸೇರಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ..!

ರೋಸಿ ಬೆಹರಾ ಎಂಬ 20 ವರ್ಷದ ಸಿವಿಲ್​ ಇಂಜಿನಿಯರಿಂಗ್​ ವಿದ್ಯಾರ್ಥಿನಿ ತನ್ನ ಕಾಲೇಜಿನ ಶುಲ್ಕವನ್ನ ಭರಿಸುವ ಸಲುವಾಗಿ ಕೂಲಿ ಕೆಲಸಕ್ಕೆ ಸೇರಿದ್ದಾಳೆ.

ಪುರಿಯ ಈ ವಿದ್ಯಾರ್ಥಿನಿ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕಳೆದ ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದಾಳೆ. ಈಕೆಯ ಡಿಪ್ಲೋಮಾ ಸರ್ಟಿಫಿಕೇಟ್​ ಕೈಗೆ ಸಿಗಬೇಕು ಅಂದರೆ 24,500 ರೂಪಾಯಿ ಶುಲ್ಕ ಭರಿಸುವ ಅಗತ್ಯವಿದ್ದು ಇದಕ್ಕಾಗಿ ಆಕೆ ಕೂಲಿ ಕೆಲಸ ಮಾಡುತ್ತಿದ್ದಾಳೆ. ರೋಸಿ ಓಡಿಶಾದ ಪುರಿ ಜಿಲ್ಲೆಯ ಗೋರಾಡಿಪಿಧಾ ಗ್ರಾಮದ ನಿವಾಸಿಯಾಗಿದ್ದಾಳೆ.

ಸಿವಿಲ್​ ಇಂಜಿನಿಯರಿಂಗ್​ನಲ್ಲಿ ನಾನು 2019ರಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದೇನೆ. ಆದರೆ ನನಗೆ ನನ್ನ ಪದವಿ ಪೂರ್ವ ಶಿಕ್ಷಣಕ್ಕೆ ಶುಲ್ಕ ಕಟ್ಟಲು ಹಣ ವ್ಯವಸ್ಥೆ ಆಗಲಿಲ್ಲ. ಇದು ಮಾತ್ರವಲ್ಲದೇ ನನ್ನ ಡಿಪ್ಲೋಮಾ ಪದವಿ ಪ್ರಮಾಣ ಪತ್ರವನ್ನ ಕಾಲೇಜಿನಿಂದ ಪಡೆಯಬೇಕು ಅಂದರೆ ನಾನು 24,500 ರೂಪಾಯಿ ಶುಲ್ಕ ಭರಿಸಬೇಕಿದೆ ಎಂದು ರೋಸಿ ಹೇಳಿದ್ರು. ಹೀಗಾಗಿ ಸಿವಿಲ್​ ಇಂಜಿನಿಯರಿಂಗ್​ ಓದಬೇಕಾಗಿದ್ದ ಈ ವಿದ್ಯಾರ್ಥಿನಿ ಇದೀಗ ದಿನಗೂಲಿ ನೌಕರಳಾಗಿ ಕೆಲಸ ಮಾಡುತ್ತಿದ್ದಾಳೆ.‌

ಖಾತೆಗೆ ಹಣ ಜಮಾ: ವಿದ್ಯಾರ್ಥಿಗಳಿಗೆ ಸಿಎಂ ಯಡಿಯೂರಪ್ಪ ಸಿಹಿ ಸುದ್ದಿ

ಆಕೆ ಸರ್ಕಾರಿ ಸೀಟಿನ ಅಡಿಯಲ್ಲಿ ಇಂಜಿನಿಯರಿಂಗ್​ ಹಾಗೂ ಬಿ ಟೆಕ್​ ಮಾಡುವ ಕನಸನ್ನ ಹೊಂದಿದ್ದಳು. ಆದರೆ ಸರ್ಕಾರಿ ಸೀಟು ಸಿಕ್ಕರೂ ಸಹ ಹಾಸ್ಟೆಲ್​ ಮತ್ತು ಬಸ್​ ಶುಲ್ಕವನ್ನ ಸ್ವಂತ ಹಣದಿಂದಲೇ ತುಂಬಬೇಕಿದೆ.

ಸ್ಥಳೀಯ ಶಾಸಕರು ಹಾಗೂ ಕಾಲೇಜು ಪ್ರಾಧಿಕಾರದ ಬಳಿ ಹಲವು ಬಾರಿ ವಿನಂತಿಸಿದ ಬಳಿಕವೂ ನನಗೆ ಡಿಪ್ಲೋಮಾ ಪ್ರಮಾಣ ಪತ್ರವನ್ನ ನೀಡಲಾಗಲಿಲ್ಲ. ನನ್ನ ಬಾಕಿ ಇರುವ ಬಸ್​ ಶುಲ್ಕ ಹಾಗೂ ಹಾಸ್ಟೆಲ್​ ಶುಲ್ಕವನ್ನ ತುಂಬಲು ನನಗೆ ಬೇರೆ ದಾರಿ ಕಾಣಲಿಲ್ಲ. ನಾನು ಪರಿಶಿಷ್ಟ ಜಾತಿಗೆ ಸೇರಿದ್ದರಿಂದ ಸರ್ಕಾರ ಕಾಲೇಜು ಶುಲ್ಕವನ್ನ ಭರಿಸಿದೆ. ಆದರೆ ಇದೀಗ ನನಗೆ ರಸ್ತೆ ಕೆಲಸ ಮಾಡದೇ ಬೇರೆ ದಾರಿಯಿಲ್ಲ ಎಂದಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...