alex Certify ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ವಿವಿಧ ಹುದ್ದೆಗಳಿಗೆ BEL ನಿಂದ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ವಿವಿಧ ಹುದ್ದೆಗಳಿಗೆ BEL ನಿಂದ ಅರ್ಜಿ ಆಹ್ವಾನ

ಭಾರತ್​ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಬಿಇಎಲ್ ​ನ ಅಧಿಕೃತ ವೆಬ್​ಸೈಟ್​​ನಿಂದ ಅರ್ಜಿ ಸಲ್ಲಿಸಬಹುದಾಗಿದೆ.‌

2021ರಲ್ಲಿ ಬಿಇಎಲ್​ ಅರ್ಜಿ ಆಹ್ವಾನಿಸಿರುವ ಹುದ್ದೆಗಳು.
1. ಪ್ರಾಜೆಕ್ಟ್ ಇಂಜಿನಿಯರ್​ : 22 ಹುದ್ದೆಗಳು ( ಎಲೆಕ್ಟ್ರಾನಿಕ್ಸ್)

2. ಪ್ರಾಜೆಕ್ಟ್ ಇಂಜಿನಿಯರ್​ : 22 ಹುದ್ದೆಗಳು (ಎಲೆಕ್ಟ್ರಾನಿಕ್ಸ್)

3. ಪ್ರಾಜೆಕ್ಟ್ ಇಂಜಿನಿಯರ್​ : 2 ಹುದ್ದೆಗಳು ( ಮೆಕಾನಿಕಲ್​)

4. ಪ್ರಾಜೆಕ್ಟ್ ಇಂಜಿನಿಯರ್​ : 2 ಹುದ್ದೆಗಳು (ಕಂಪ್ಯೂಟರ್​ ಸೈನ್ಸ್)

5. ಸೆಕ್ಯೂರಿಟಿ(ಪುರುಷ) ಅಥವಾ ಅಸಿಸ್ಟೆಂಟ್​ ಸೆಕ್ಯೂರಿಟಿ (ಪುರುಷ) : 1 ಹುದ್ದೆ

6. ಜ್ಯೂನಿಯರ್​ ಸೂಪರ್ ವೈಸರ್​ ಸೆಕ್ಯೂರಿಟಿ (ಪುರುಷ) : 1 ಹುದ್ದೆ

7. ಹವಾಲ್ದಾರ್​ (ಪುರುಷ) : 20 ಹುದ್ದೆ

ಶುಭ ಸುದ್ದಿ: ಏ.1 ರಿಂದ ʼಸರಳ ಪಿಂಚಣಿ ಯೋಜನೆʼ ಜಾರಿಗೆ IRDAI ಸೂಚನೆ

ಪ್ರಾಜೆಕ್ಟ್ ಇಂಜಿನಿಯರ್​ಗಳನ್ನ 2 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತೆ. ಈ ಅವಧಿಯು ಗರಿಷ್ಟ 4 ವರ್ಷಗಳವರೆಗೆ ಮುಂದುವರಿಯುವ ಸಾಧ್ಯತೆ ಕೂಡ ಇದೆ.

ಅಭ್ಯರ್ಥಿಗಳಿಗೆ ಕ್ರಮವಾಗಿ 1,2,3 ಹಾಗೂ 4ನೇ ವರ್ಷದ ಗುತ್ತಿಗೆಗೆ 35000 ರೂ., 40000 ರೂ., 45000 ರೂ. ಹಾಗೂ 50000 ರೂಪಾಯಿ ಸಂಬಳ ಸಿಗಲಿದೆ.

ಬಿಇ, ಬಿ ಟೆಕ್​ ಹಾಗೂ ಬಿಎಸ್​ಸಿ ಇಂಜಿನಿಯರಿಂಗ್​ ಪದವಿ ಪಡೆದಿರುವ ಅಭ್ಯರ್ಥಿಗಳು ಪ್ರಾಜೆಕ್ಟ್ ಇಂಜಿನಿಯರ್​ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸೆಕ್ಯೂರಿಟಿ ಆಫೀಸರ್​ ಹಾಗೂ ಅಸಿಸ್ಟಂಟ್​ ಸೆಕ್ಯೂರಿಟಿ ಆಫೀಸರ್​ ಹುದ್ದೆಗೆ ಯಾವುದೇ ಪದವೀಧರರು ಅರ್ಹರಾಗಿರುತ್ತಾರೆ. ಉಳಿದ ಹುದ್ದೆಗಳಿಗೆ ಎಸ್​ಎಸ್​ಎಲ್​ಸಿ ಪಾಸ್​ ಆಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...