ಹಾಲಿವುಡ್ ನಟಿ ಹಾಗೂ ಟಿವಿ ಸ್ಟಾರ್ ಪಮೇಲಾ ಆಂಡರ್ಸನ್ ಸದಾ ಸುದ್ದಿಯಲ್ಲಿರ್ತಾರೆ. ಪ್ಲೇ ಬಾಯ್ ನಿಯತಕಾಲಿಕೆಯ ಸ್ಟಾರ್ ಐಕಾನ್ ಎಂದೇ ಕರೆಸಿಕೊಳ್ಳುವ ಪಮೇಲಾ ಐದು ಮದುವೆಯಾಗಿದ್ದಾರೆ. ಒಂದೇ ವ್ಯಕ್ತಿಯನ್ನು ಪಮೇಲಾ ಎರಡು ಬಾರಿ ಮದುವೆಯಾಗಿದ್ದಾರೆ.
ಪಮೇಲಾ ಕೆಲ ದಿನಗಳ ಹಿಂದಷ್ಟೆ ಐದನೇ ಮದುವೆಯಾಗಿದ್ದಾರೆ. ಕ್ರಿಸ್ಮಸ್ ಸಂದರ್ಭದಲ್ಲಿ ಪಮೇಲಾ ಮದುವೆಯಾಗಿದ್ದಾರೆ. ಪಮೇಲಾ ಈ ಬಾರಿ ತನ್ನ ಬಾಡಿಗಾರ್ಡ್ ಕೈ ಹಿಡಿದಿದ್ದಾರೆ. ಬಾಡಿಗಾರ್ಡ್ ಡಾನ್ ಹೇಹರ್ಸ್ಟ್ ತನ್ನ ಪತಿ ಎಂದು ಪಮೇಲಾ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಸಾಕಷ್ಟು ಫೋಟೋ ವೈರಲ್ ಆಗಿದೆ. ಒಂದು ಫೋಟೋದಲ್ಲಿ ಪಮೇಲಾ, ಡಾನ್ ಹೇಹರ್ಸ್ಟ್ ಗೆ ಮುತ್ತಿಟ್ಟರೆ ಮತ್ತೆ ಕೆಲ ಫೋಟೋಕ್ಕೆ ಫೋಸ್ ನೀಡಿದ್ದಾರೆ.
ಎರಡು ವಾರವೂ ನಡೆಯಲಿಲ್ಲ ಈಕೆಯ 5ನೇ ಮದುವೆ
ಲಾಕ್ ಡೌನ್ ಸಂದರ್ಭದಲ್ಲಿ ಬಾಡಿ ಗಾರ್ಡ್ ಮೇಲೆ ಪ್ರೀತಿ ಚಿಗುರಿತ್ತು. ನಂತ್ರ ಮದುವೆಯಾದೆವು. ಕೆಲವರನ್ನು ಮದುವೆಗೆ ಕರೆಯಲು ಸಾಧ್ಯವಾಗ್ಲಿಲ್ಲ. ಕುಟುಂಬಸ್ಥರು ಮತ್ತು ಕೆಲವೇ ಕೆಲವು ಸ್ನೇಹಿತರು ಬಂದಿದ್ದರು ಎಂದು ಪಮೇಲಾ ಹೇಳಿದ್ದರು. ಇದಕ್ಕೂ ಮೊದಲು ಫೆಬ್ರವರಿಯಲ್ಲಿ ಪಮೇಲಾ ಸುದ್ದಿಗೆ ಬಂದಿದ್ದರು. ಕೇವಲ 12 ದಿನದಲ್ಲೇ ಜಾನ್ ಪೀಟರ್ಸ್ ಸಂಬಂಧವನ್ನು ಮುರಿದುಕೊಂಡಿದ್ದಳು ಪಮೇಲಾ. ಮೊದಲ ಬಾರಿ ಪಮೇಲಾ 1995ರಲ್ಲಿ ಮದುವೆಯಾಗಿದ್ದರು. 1998ರಲ್ಲಿ ಮದುವೆ ಮುರಿದು ಬಿದ್ದಿತ್ತು.