ಬೆಂಗಳೂರು: ಎಂ.ಎಲ್.ಸಿ. ಹೆಚ್. ವಿಶ್ವನಾಥ್ ವಿರುದ್ಧ ಹೈಕೋರ್ಟ್ ನೀಡಿದ್ದ ಅನರ್ಹತೆ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ವಿಶ್ವನಾಥ್ ಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಇದೀಗ ಹೆಚ್. ವಿಶ್ವನಾಥ್ ಮತ್ತೊಂದು ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ನಾನು ಒಂಟಿಯಲ್ಲ ಎಂದು ಹೇಳಿದ್ದಕ್ಕೆ ಧನ್ಯವಾದ. ಆದರೆ ನನಗೆ ಸಚಿವರ ಸಹಾನುಭೂತಿ ಬೇಕಿಲ್ಲ. ನಮ್ಮ 17 ಜನರ ಟೀಂ ಸಿಎಂ ಯಡಿಯೂರಪ್ಪ ಜೊತೆ ಮಾತನಾಡಬೇಕಿತ್ತು. ಅದನ್ನು ಬಿಟ್ಟು ಬಾಯಿ ಮಾತಿನಲ್ಲಿ ಸಹಾನುಭೂತಿ ತೋರುವ ಅಗತ್ಯವಿಲ್ಲ. ನಾವೆಲ್ಲ ಜೊತೆಗಿದ್ದೇವೆ ಆದರೆ ಅವರು ಮಂತ್ರಿಯಾಗಿದ್ದಾರೆ. ಎಲ್ಲವೂ ಪವರ್ ಪಾಲಿಟಿಕ್ಸ್ ಎಂದು ಹೇಳಿದ್ದಾರೆ.
ಬಿಗ್ ನ್ಯೂಸ್: ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹೆಚ್. ವಿಶ್ವನಾಥ್ ಗೆ ತೀವ್ರ ಮುಖಭಂಗ – ಹೈಕೋರ್ಟ್ ತೀರ್ಪು ಎತ್ತಿ ಹಿಡಿದ ಸುಪ್ರಿಂ
ಇದೇ ವೇಳೆ ಸಚಿವ ಸ್ಥಾನಕ್ಕೆ ಸುಪ್ರೀಂ ಕೋರ್ಟ್ ತಡೆಯೊಡ್ದಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನ ಹೋದರೂ ನನಗೆ ಸಭಾಪತಿ ಹುದ್ದೆ ನೀಡಬಹುದು. ಮುಂದೆ ಒಂದು ವೇಳೆ ಪಕ್ಷ ನನಗೆ ಸಭಾಪತಿ ಹುದ್ದೆ ಕಲ್ಪಿಸಿದರೆ ನೋಡೋಣ ಎಂದು ಹೇಳಿದರು. ಒಟ್ಟಾರೆ ವಿಶ್ವನಾಥ್ ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಸಭಾಪತಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.