ಕಿಟ್ ಕ್ಯಾಟ್ ಚಾಕೊಲೇಟ್ ನ ಬಾರ್ ಗಳನ್ನು ತುಂಡರಿಸಿ ಸೇವಿಸುವುದು ಸಾಮಾನ್ಯ. ಆದರೆ, ಸಿಹಿ ಇದೆ ಎಂದು ಅದನ್ನು ತೊಳೆದು ತಿನ್ನಲು ಯುವತಿಯೊಬ್ಬರು ಮುಂದಾದ ವಿಡಿಯೋವೊಂದು ವೈರಲ್ ಆಗಿದೆ. ಯುವತಿಯ ಮೂರ್ಖತನಕ್ಕೆ ನೆಟ್ಟಿಗರು ಕಾಲೆಳೆದಿದ್ದಾರೆ.
ಟಿಕ್ ಟಾಕ್ ವಿಡಿಯೋದಲ್ಲಿ ಯುವತಿ ” ನನ್ನ ಬಾಯ್ ಫ್ರೆಂಡ್ ಚಾಕೊಲೇಟ್ ನೀಡಿದ. ಇದು ಭಾರಿ ಸಿಹಿ ಇದೆ. ಇದರಿಂದ ತೊಳೆಯುತ್ತಿದ್ದೇನೆ” ಎಂದು ಮಹಿಳೆ ವಿವರಣೆ ನೀಡಿದ್ದಾಳೆ. ಯುವತಿ ಯಾರು ಎಲ್ಲಿಯವಳು ಎಂಬ ಮಾಹಿತಿ ಸಿಕ್ಕಿಲ್ಲ.
“ನಿನಗೆ ಬೇಜಾರು ಮಾಡಿದವರ್ಯಾರು..?” ಎಂದು ಒಬ್ಬ ಪ್ರಶ್ನಿಸಿದರೆ, ಇನ್ನೊಬ್ಬರು “ಆಕೆ ಜೋಕ್ ಮಾಡುತ್ತಿದ್ದಾಳೆ ಎಂದುಕೊಂಡಿದ್ದೇನೆ” ಎಂದಿದ್ದಾರೆ. ” ನಿನಗೆ ಗಲ್ಲು ಶಿಕ್ಷೆಯಾಗಲಿದೆ. ಪೆರೋಲ್ ಕೂಡ ಸಿಗುವುದಿಲ್ಲ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.