ಟೋಕಿಯೋ: ಈ ವರ್ಷ ಜಪಾನ್ ನ ಟೋಕಿಯೋದಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟವೇನಾದರೂ ರದ್ದಾದರೆ ಇನ್ಶುರೆನ್ಸ್ ಹೂಡಿಕೆದಾರರಿಗೆ 2 ರಿಂದ 3 ಬಿಲಿಯನ್ ಡಾಲರ್ ನಷ್ಟವಾಗಲಿದೆ ಎಂದು ಹೂಡಿಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಒಲಿಂಪಿಕ್ ಬೋರ್ಡ್ ಕಮಿಟಿ ಸಭೆ ಈ ವಾರ ನಡೆಯಲಿದೆ. ಕ್ರೀಡೆಗಳನ್ನು 6 ತಿಂಗಳು ಮುಂದೂಡುವ ಬಗ್ಗೆ ಸಭೆಯ ಅಜೆಂಡಾದಲ್ಲಿದ್ದು, ಪರಿಹಾರ ನೀಡುವ ಬಗ್ಗೆಯೂ ನಿರ್ಣಯವಾಗಲಿದೆ.
ಅಜಿಂಕ್ಯ ರಹಾನೆ ನೀಡಿದ ಗಿಫ್ಟ್ ಕಂಡು ಆಸ್ಟ್ರೇಲಿಯಾ ಆಟಗಾರ ಫಿದಾ..!
ಕಳೆದ ವರ್ಷ ಮಾರ್ಚ್ ನಲ್ಲೇ ಒಲಿಂಪಿಕ್ ಕ್ರೀಡಾಕೂಟ ನಿಗದಿಯಾಗಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ 12 ತಿಂಗಳು ಮುಂದೂಡಲಾಗಿತ್ತು. ಈಗ ಜಪಾನ್ ನಲ್ಲಿ ಕೋವಿಡ್ ಮೂರನೇ ಅಲೆಯ ಕಾರಣ ಎಮರ್ಜೆನ್ಸಿ ಘೋಷಿಸಲಾಗಿದೆ. ಈಗಲೂ ಕ್ರೀಡಾಕೂಟ ಮುಂದೂಡುವ ಚರ್ಚೆ ನಡೆದಿದ್ದು, ಇನ್ಶುರೆನ್ಸ್ ಹೂಡಿಕೆದಾರರು ನಷ್ಟದ ಆತಂಕದಲ್ಲಿದ್ದಾರೆ.